ಮಂಗಳೂರು: 220ಕೆ.ವಿ ಎಸ್.ಆರ್.ಎಸ್ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ.ಯೆಯ್ಯಾಡಿ, ಹರಿಪದವು ಫೀಡರ್ ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ (ಜಿ.ಓ.ಎಸ್ ರಿಪೇರಿ, ಟ್ರಿಕಟ್ಟಿಂಗ್) ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಜು.14ರ ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30ರವರೆಗೆ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ತಡಂಬೈಲ್ :
ತಡಂಬೈಲ್:11ಕೆ.ವಿ. ತಡಂಬೈಲ್ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜು.14ರ ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಎನ್ಐಟಿಕೆ, ಪಡ್ರೆ, ಮುಕ್ಕ, ಶ್ರೀನಿವಾಸನಗರ, ಸಸಿಹಿತ್ಲು, ದಾಂಡಿ, ಮೂಡುಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Kshetra Samachara
13/07/2022 07:32 pm