ಮಂಗಳೂರು: ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಸೌತ್ ವಾರ್ಫ್ ಮತ್ತು ಮಾರ್ಕೆಟ್ ಫಿಡರ್ ಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 6ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ 33/11 ಕೆವಿ ನೆಹರೂ ಮೈದಾನ ಉಪ ಕೇಂದ್ರವನ್ನು 110/11ಕೆವಿ ವಿದ್ಯುತ್ ಉಪಕೇಂದ್ರವನ್ನಾಗಿ ಉನ್ನತೀಕರಿಸುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಈ ಫೀಡರ್‌ಗಳ ವ್ಯಾಪ್ತಿಯ ಡಿಸಿ ಆಫೀಸ್, ಉಪ ಧಕ್ಕೆ, ಪೋರ್ಟ್ ಧಕ್ಕೆ, ನೀರೇಶ್ವಾಲ್ಯ ರಸ್ತೆ, ಗೂಡ್ ಶೆಡ್, ರಸ್ತೆ, ಬದ್ರಿಯಾ, ಓಲ್ಡ್ ಪೋರ್ಟ್, ಜೆ.ಎಂ. ಕ್ರಾಸ್, ಲೇಡಿಗೋಷನ್, ಮಾರ್ಕೆಟ್ ರೋಡ್, ಹೊಟೇಲ್ ಶ್ರೀನಿವಾಸ್, ಕಿಲ್ಲೆ ಕೋರ್ಟ್, ಮೋಹಿನಿ ವಿಲಾಸ್, ಜಿ.ಎಚ್.ಎಸ್. ರೋಡ್, ಗೌರಿ ಮಠ ರೋಡ್, ಭವಂತಿ ಸ್ಟೀಟ್, ನಂದಾದೀಪ, ಶಾಂತದುರ್ಗ, ಪಿ.ಎಂ.ರಾವ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
ನಗರದ ಕದ್ರಿ 33/11ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಕದ್ರಿ ಟೆಂಪಲ್ ಫೀಡರ್‌ನಲ್ಲಿ ಡಿ.6 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಆದದ್ರಿಂದ ಅಂದು ಅಳ್ವಾರಿಸ್ ರಸ್ತೆ, ಕೈಬಟ್ಟಲ್, ಜಾರ್ಜ್ ಮಾರ್ಟಿಸ್ ರಸ್ತೆ, ಟೆಂಪಲ್ ರಸ್ತೆ, ಕದ್ರಿ ಟೆಂಪಲ್, ಮಂಜುಶ್ರೀ ಲೇಔಟ್, ಕದ್ರಿ ಟೆಂಪಲ್ ನ್ಯೂರಸ್ತೆ, ಕದ್ರಿ ಕಂಬಳ ರಸ್ತೆ, ಸರ್ಕ್ಯೂಟ್ ಹೌಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ನಗರದ ಕುಲಶೇಖರ 110/33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ನಾಗುರಿ(ಎಕ್ಕೂರು) ಫೀಡರ್ ಮತ್ತು 11ಕೆವಿ ಪಂಪ್‌ವೆಲ್ ಫೀಡರ್‌ನಲ್ಲಿ ಡಿ.6ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸ್ಥಾರ್ಟ್‌ಸಿಟಿ ವತಿಯಿಂದ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಅಂದು ಮರೋಳಿ, ಪಡೀಲ್, ಅಳಪೆ, ಮೇಘನಗರ, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್‌ವೆಲ್ ಕಪಿತಾನಿಯೊ, ರೆಡಿಬಿಲ್ಡಿಂಗ್, ರೈಲ್ವೇ ಸ್ಟೇಷನ್, ಕ್ವಾಡ್ ಸೆಂಟರ್, ಇಂಡಿಯಾನ ಹಾಸ್ಪಿಟಲ್, ನಿಟ್ಟೆ ಎಜುಕೇಷನ್ ಪಂಪ್‌ವೆಲ್ ಮಹಾವೀರ ಸರ್ಕಲ್ ಪಂಪ್‌ವೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Kshetra Samachara
05/12/2024 07:10 pm