ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಕ್ರಿಕೆಟ್ ಆಟವಾಡುವಾಗ ಹೃದಯಾಘಾತದಿಂದ ಸಾವು

ಬಂಟ್ವಾಳ: ವ್ಯಕ್ತಿಯೊಬ್ಬರು ಕ್ರಿಕೆಟ್ ಆಡುತ್ತಿರುವಾಗ ಮೈದಾನದಲ್ಲಿ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕಕ್ಯಪದವಿನಲ್ಲಿ ಫೆ.20ರಂದು ಸಂಭವಿಸಿದೆ.

ಇಲ್ಲಿನ ಅನ್ನಡ್ಕ ನಿವಾಸಿ ಮನೋಹರ್ ಪ್ರಭು(45) ಅವರು ಮೃತಪಟ್ಟವರು. ಕಕ್ಯಪದವಿನ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ನಡೆಯುತ್ತಿರುವಾಗ ಮನೋಹರ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.

ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತ ಪಟ್ಟಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಪ್ರಗತಿಪರ ಕೃಷಿಕರಾಗಿದ್ದ ಅವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದು ಜನಾನುರಾಗಿಯಾಗಿದ್ದರು. ಮನೋಹರ ಪ್ರಭು ಅವರು ಸ್ಥಳಿಯವಾಗಿ ಮಾತ್ರವಲ್ಲದೆ ವಿವಿಧ ತಂಡದಲ್ಲಿ ಆಟಗಾರನಾಗಿ ಪ್ರತಿನಿಧಿಸುತ್ತಿದ್ದರು.ಆಲ್ ರೌಂಡರ್ ಆಟಗಾರರಾಗಿರುವ ಅವರು ರವಿವಾರದಂದು ಸ್ಥಳೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದು, ಲೀಗ್ ಹಂತದಲ್ಲಿ ನಡೆದ ಎರಡು ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಮಿಂಚಿದ್ದು,ತಂಡವನ್ನು ಗೆಲುವಿನ ದಡವನ್ನು ದಾಟಿಸಿದ್ದರು.

ಈ ಪಂದ್ಯಾಟದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೂ ಭಾಜನರಾಗಿದ್ದರು. ಮಧ್ಯಾಹ್ನದ ಮೂರನೇ ಪಂದ್ಯಾಟಕ್ಕೆ ಸಿದ್ದರಾಗಿದ್ದ ಅವರು ಎದೆನೋವು ಕಾಣಿಸಿಕೊಂಡಿದ್ದು ಹಠಾತ್ತನೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

23/02/2022 09:01 pm

Cinque Terre

11.07 K

Cinque Terre

1

ಸಂಬಂಧಿತ ಸುದ್ದಿ