ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ,ಮಲ್ಪೆ ಸಮೀಪದ ಸೈಂಟ್ ಮೇರಿಸ್ ದ್ವೀಪಯಾನ ಪ್ರಾರಂಭಗೊಂಡಿದೆ. ಮಳೆಗಾಲದಲ್ಲಿ ಈ ದ್ವೀಪಕ್ಕೆ ನಿರ್ಬಂಧ ಇದೆ. ಇದೀಗ ಮಳೆಗಾಲದ ನಿರ್ಬಂಧ ಮುಗಿದಿದ್ದು ಸುರಕ್ಷತಾ ಕ್ರಮಗಳೊಂದಿಗೆ ದ್ವೀಪವು ಪ್ರವಾಸಿಗರಿಗೆ ತೆರೆದುಕೊಂಡಿದೆ. ಸೆಲ್ಫಿ ಪಾಯಿಂಟ್, ಸ್ವಿಮ್ಮಿಂಗ್ ಪಾಯಿಂಟ್ ರಚನೆ ಜೊತೆಗೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಸುಮಾರು 8 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.
ಪ್ರವಾಸಿಗರ ಅನುಕೂಲಕ್ಕಾಗಿ ಸುಮಾರು 300 ಮೀ. ಉದ್ದದ ಕಾಲ್ನಡಿಗೆ ಮಾರ್ಗ ರಚಿಸಲಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಬಟ್ಟೆ ಬದಲಾಯಿಸುವ ಕೊಠಡಿ ಮತ್ತು ಶೌಚಾಲಯವನ್ನು ನವೀಕರಿಸಲಾಗಿದೆ. ದ್ವೀಪದ ಒಂದು ಭಾಗದಲ್ಲಿ ಸುಮಾರು 110 ಮೀ. ಅಗಲ ಮತ್ತು 100 ಮೀ. ಉದ್ದದ ಈಜು ವಲಯವನ್ನು ರಚಿಸಲಾಗಿದೆ. 4 ಕಡೆಗಳಲ್ಲಿ ಗಡಿಯಾರ ಗೋಪುರ ಅಳವಡಿಸಲಾಗಿದೆ. ದ್ವೀಪದ ಸುಂದರ ಪ್ರಕೃತಿ ಸೌಂದರ್ಯವನ್ನು ಸವಿದು ಸೆಲ್ಫಿ ತೆಗೆಯಬಯಸುವವರಿಗಾಗಿ 3 ಸೆಲ್ಫಿ ಪಾಯಿಂಟ್ ರಚಿಸಲಾಗಿದೆ.
PublicNext
08/10/2022 05:00 pm