ಮುಲ್ಕಿ: ಕಳೆದ ಕೆಲವು ದಿನಗಳಿಂದ ಕುಬೆವೂರು ಶಿಮಂತೂರು ದೇವಸ್ಥಾನ ರಸ್ತೆಯಲ್ಲಿ ವಾಹನದ ಚಕ್ರದಡಿಗೆ ಸಿಲುಕಿ ಮೃತಪಟ್ಟು ದುರ್ವಾಸನೆ ಬೀರುತ್ತಿದ್ದ ನಾಯಿಮರಿಯನ್ನು ಶಿಮಂತೂರು ಪರಿಸರದ ಸಣ್ಣ ಮಕ್ಕಳು ತೆರವುಗೊಳಿಸಿದ್ದಾರೆ.
ಬಪ್ಪನಾಡು ದೇವಸ್ಥಾನದಲ್ಲಿ ಸ್ವಚ್ಛತೆ ಮುಗಿಸಿ ವಾಪಸ್ ಬರುವಾಗ ವಾಹನದ ಅಡಿಗೆ ಬಿದ್ದು ಮೃತಪಟ್ಟಿರುವ ನಾಯಿ ಮರಿಯನ್ನು ಕಂಡು ಕೂಡಲೇ ಕಾರ್ಯಪ್ರವೃತ್ತರಾದ ಮಕ್ಕಳು ಹಾರೆಯಿಂದ ಪಕ್ಕದಲ್ಲೇ ಗುಂಡಿ ತೋಡಿ ಮಣ್ಣು ಹಾಕಿ ನಾಯಿಮರಿಯನ್ನು ಹೂತುಹಾಕಿ ಸ್ವಚ್ಛತೆ ಮೂಲಕ ಮಾದರಿಯಾಗಿದ್ದಾರೆ.
Kshetra Samachara
19/09/2022 10:45 am