ಮುಲ್ಕಿ:ಮುಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಕಿಲ್ಪಾಡಿ, ಶಿಮಂತೂರು, ಅತಿಕಾರಿಬೆಟ್ಟು ರೋಟರಿ ಗ್ರಾಮೀಣ ದಳದ ವತಿಯಿಂದ ಶಿಮಂತೂರು ದೇವಸ್ಥಾನಕ್ಕೆ ರಸ್ತೆ ಸುರಕ್ಷತೆಗೆ ಬ್ಯಾರಿಕೇಡ್ ಗಳನ್ನು ಒದಗಿಸಲಾಯಿತು
ಈ ಸಂದರ್ಭ ರೋಟರಿ ಗ್ರಾಮೀಣ ದಳದ ಚೇರ್ಮ್ಯಾನ್ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ ರೋಟರಿ ಕ್ಲಬ್ ನಿಂದ ರಸ್ತೆ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು ದೇವಸ್ಥಾನದ ಪರಿಸರದಲ್ಲಿ ಅಪಘಾತ ತಡೆಗೆ ಬ್ಯಾರಿಕೇಡ್ ಗಳನ್ನು ಒದಗಿಸಲಾಗಿದ್ದು ನಿಧಾನವಾಗಿ ವಾಹನ ಚಲಾಯಿಸಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೀತಮ್ ಉಪಾಧ್ಯಾಯ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಅತಿಕಾರಿ ಬೆಟ್ಟು,ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಶಶಿಕಲಾ, ವಿಕಾಸ್ ಶೆಟ್ಟಿ, ಮುಲ್ಕಿ ರೋಟರಿ ಕ್ಲಬ್ ಸದಸ್ಯರಾದ ಜೇಮ್ಸ್ ಡಿಸೋಜಾ, ಹಬಿಬುಲ್ಲ, ಭಾನುಮತಿ ಶೆಟ್ಟಿ, ಕಿಲ್ಪಾಡಿ, ಶಿಮಂತೂರು, ಅತಿಕಾರಿಬೆಟ್ಟು ರೋಟರಿ ಗ್ರಾಮೀಣ ದಳದ ಅಧ್ಯಕ್ಷೆ ಪ್ರೀತಿಕಾ ಮತ್ತಿತರರು ಉಪಸ್ಥಿತರಿದ್ದರು.ಕಿಲ್ಪಾಡಿ, ಶಿಮಂತೂರು, ಅತಿಕಾರಿಬೆಟ್ಟು ರೋಟರಿ ಗ್ರಾಮೀಣ ದಳದ
ಪ್ರಥಮ್ ಸ್ವಾಗತಿಸಿದರು ಮಮತಾ ಶೆಟ್ಟಿ ಧನ್ಯವಾದ ಅರ್ಪಿಸಿದರು
Kshetra Samachara
15/12/2024 04:42 pm