ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಮ್ರಾಲ್:ಲೆಕ್ಕಪತ್ರ ಮಂಡನೆಯಲ್ಲಿ ಪಾರದರ್ಶಕತೆಗೆ ಜಮಾ ಬಂದಿ ಪೂರಕ

ಮುಲ್ಕಿ: ಕೆಮ್ರಾಲ್ ಗ್ರಾಮ ಪಂಚಾಯಿತಿಯ 2021 22ನೇ ಸಾಲಿನ ಜಮಾ ಬಂದಿ ಕಾರ್ಯಕ್ರಮ ಪಂಚಾಯತ್ ಸಮುದಾಯ ಭವನದಲ್ಲಿ ನಡೆಯಿತು.ಸಭೆಯ ನೋಡಲ್ ಅಧಿಕಾರಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ ಕುಮಾರ್ ಮಾತನಾಡಿ ಪಂಚಾಯತಿಯ ಲೆಕ್ಕಪತ್ರ ಮಂಡನೆಯಲ್ಲಿ ಪಾರದರ್ಶಕತೆಗೆ ಜಮಾ ಬಂದಿ ಪೂರಕ ಎಂದರು.

ಮಾಜಿ ಮಂಡಲ ಪ್ರಧಾನ ಬಾಲಾದಿತ್ಯ ಆಳ್ವ ಮಾತನಾಡಿ ಪಂಚಾಯಿತಿಗೆ ಆದಾಯ ಹೆಚ್ಚುವರಿಗೆ ಪ್ರಯತ್ನಿಸಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಪಂಚಾಯತ್ ಅಧ್ಯಕ್ಷೆ ಲೀಲ ಕೃಷ್ಣಪ್ಪ ಮಾತನಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ, ಪಂಚಾಯತ್ ಸದಸ್ಯರು, ಪಿಡಿಓ ಅರುಣ್ ಪ್ರದೀಪ್ ಡಿಸೋಜಾ, ಕಾರ್ಯದರ್ಶಿ ಹರಿಶ್ಚಂದ್ರ, ಗ್ರಾಮ ಲೆಕ್ಕಿಗ ಕೇಶವ, ಆರೋಗ್ಯ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

14/09/2022 03:20 pm

Cinque Terre

2.17 K

Cinque Terre

0

ಸಂಬಂಧಿತ ಸುದ್ದಿ