ಕುಂದಾಪುರ: ಗ್ರಾಮಾಂತರ ಠಾಣೆಯ ನೂತನ ಪಿಎಸ್ಐ ಆಗಿ ಪವನ್ ನಾಯ್ಕ್ ಅಧಿಕಾರ ಸ್ವೀಕರಿಸಿದ್ದಾರೆ.
2016ರ ಬ್ಯಾಚಿನ ಅಧಿಕಾರಿಯಾಗಿರುವ ಪವನ್ ನಾಯ್ಕ್ ಮೂಲತ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದವರು. ಈ ಹಿಂದೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರೋಫೆಶಿನರಿ ಅವಧಿ ಮುಗಿಸಿ ಧರ್ಮಸ್ಥಳ ಹಾಗೂ ಬೈಂದೂರು ಠಾಣೆಯಲ್ಲಿ ತಲಾ ಒಂದೂವರೆ ವರುಷಗಳ ಕಾಲ ಪಿಎಸ್ಐ ಆಗಿ ಸೇವೆ ಸಲ್ಲಿಸಿರುತ್ತಾರೆ.
ಈ ಹಿಂದೆ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ಆಗಿದ್ದ ನಿರಂಜನ್ ಗೌಡ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆಗೊಳಿಸಿ ಅವರ ತೆರವಾದ ಸ್ಥಾನಕ್ಕೆ ಪವನ್ ನಾಯ್ಕ್ ಅವರನ್ನು ನಿಯುಕ್ತಿಗೊಳಿಸಿ ಪಶ್ಚಿಮ ವಲಯ ಮಹಾ ನಿರೀಕ್ಷಕರು ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಬೈಂದೂರು ಠಾಣೆಯಲ್ಲಿ ಕರ್ತವ್ಯ ನಿರ್ವಯಿಸುತ್ತಿರುವ ವೇಳೆ ಪವನ ನಾಯ್ಕ್ ಬಹಳಷ್ಟು ಪ್ರಕರಣಗಳನ್ನು ಬೇಧಿಸಿ ಕೆಲವೊಂದಿಷ್ಟು ಪುಂಡರನ್ನು ಹೆಡೆಮುರಿ ಕಟ್ಟಿರುವ ಹೆಗ್ಗಳಿಕೆ ಇವರಿಗಿದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಂದು ಬೈಂದೂರು ಭಾಗದ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
Kshetra Samachara
24/08/2022 07:33 pm