ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:"ಕೃಷಿ ಜಾನಪದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕು"

ಮುಲ್ಕಿ: ತುಳುನಾಡು ಬಂಟ ಮಹಿಳಾ ಸಂಘ ಮುಲ್ಕಿ ವತಿಯಿಂದ ಕೆಂಚನಕೆರೆ ಅಂಬಾನಿವಾಸದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.

ಕಟೀಲು ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಉಪನ್ಯಾಸಕಿ ಭಾರತಿ ಶೆಟ್ಟಿ ಚೆನ್ನಮಣೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಹಿಂದಿನ ಕಾಲದ ಆಟಿಯ ಸಂಸ್ಕೃತಿಗಳನ್ನು ನೆನಪಿಸಿಕೊಳ್ಳುವ ಮೂಲಕ ಕೃಷಿ ಜಾನಪದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ವೈಜ್ಞಾನಿಕ ಆಚರಣೆಗಳ ಜೊತೆಗೆ ಹಿಂದಿನ ಕಾಲದ ಹಿರಿಯರ ಪರಿಕಲ್ಪನೆಗಳನ್ನು ತಿಳಿದುಕೊಂಡು ಆಟಿಯ ಸಾಂಸ್ಕೃತಿಕ ಆಚಾರ ವಿಚಾರಗಳನ್ನು ನೆನಪಿಸುವ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡು ಬಂಟ ಮಹಿಳಾ ಸಂಘದ ಅಧ್ಯಕ್ಷೆ ಶಮೀನಾ ಆಳ್ವ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತಿ ಎಕ್ಕಾರು ದಯಾಮಣಿ ಶೆಟ್ಟಿ ಆಟಿಯ ದಿನದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಜಯಂತಿ ಶೆಟ್ಟಿ, ಕಾರ್ಯದರ್ಶಿ ಕುಸುಮಾ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಎ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಪಿಯುಸಿ ಸಾಧಕರ ನೆಲೆಯಲ್ಲಿ ಯತಿನ್ ಜೆ ಶೆಟ್ಟಿ, ಸ್ಪೂರ್ತಿ ಶೆಟ್ಟಿ ರವರನ್ನು ಗೌರವಿಸಲಾಯಿತು.

ಬಳಿಕ ಆಟಿಯ ತಿಂಡಿ ತಿನಿಸುಗಳ ಊಟ ಉಪಚಾರ ನಡೆಯಿತು. ಸಂಗೀತ ಶೆಟ್ಟಿ, ಧನ್ಯವಾದ ಅರ್ಪಿಸಿದರು.

Edited By : PublicNext Desk
Kshetra Samachara

Kshetra Samachara

09/08/2022 01:50 pm

Cinque Terre

3.71 K

Cinque Terre

0

ಸಂಬಂಧಿತ ಸುದ್ದಿ