ಮಂಗಳೂರು:ಶಿಕ್ಷಣದ ಸಾಮಾಗ್ರಿಗಳ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆ ವಾಪಾಸು ಪಡೆಯಲು ಒತ್ತಾಯಿಸಿ ಪ್ರಧಾನಮಂತ್ರಿಗಳಿಗೆ ದ.ಕ. ಜಿಲ್ಲಾ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು
ಕೇಂದ್ರ ಸರಕಾರ ಶಿಕ್ಷಣದ ಸಾಮಾಗ್ರಿಗಳಾದ ಪೆನ್ಸಿಲ್, ಷಾರ್ಪನರ್, ರೈಟಿಂಗ್, ಡ್ರಾಯಿಂಗ್, ಪ್ರಿಂಟಿಂಗ್, ಇಂಕ್, ಪೇಪರ್ ಮೇಲೆ ಶೇ. 18ರಷ್ಟು ಹಾಗೂ ಚಾಟ್ಸ್, ಗ್ರಾಫ್ ಪೇಪರ್, ನೋಟುಬುಕ್ ಮೇಲೆ ಶೇ. 12ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿದ ತೀರ್ಮಾನವನ್ನು ದ.ಕ. ಜಿಲ್ಲಾ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಸಮಿತಿ ವಿರೋಧವನ್ನು ವ್ಯಕ್ತಪಡಿಸುತ್ತದೆ.
ಈಗಾಗಲೇ ಶಿಕ್ಷಣ ಕ್ಷೇತ್ರ ಸಂಪೂರ್ಣ ಖಾಸಗೀಕರಣಗೊಂಡ ಪರಿಣಾಮ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಖಾಸಗೀ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಹೆಸರಲ್ಲಿ ವಿಧಿಸುವ ದುಬಾರಿ ಶುಲ್ಕದಿಂದ ಜನಸಾಮಾನ್ಯರು ಮಾನಸಿಕ ಹಿಂಸೆಯನ್ನು ಅನುಭವಿಸುತ್ತಿದ್ದು, ಈ ನಡುವೆ ಕೇಂದ್ರ ಸರಕಾರ ಶಿಕ್ಷಣಕ್ಕೆ ಬೇಕಾದ ಅಗತ್ಯ ಸಾಮಾಗ್ರಿಗಳ ಮೇಲೆ ವಿಧಿಸಿದ ವಿಪರೀತ ಜಿಎಸ್‌ಟಿ ತೆರಿಗೆಯು ಮತ್ತಷ್ಟು ಹೊರೆಯಾಗಲಿದೆ. ಮಾತ್ರವಲ್ಲ ಬಡವಿದ್ಯಾರ್ಥಿಗಳು ಶಿಕ್ಷಣದಿಂದಲೇ ವಂಚಿತರಾಗುವ ಅಪಾಯ ಎದುರಾಗಿದೆ.
ಯುನೆಸ್ಕೋ ವರದಿ ಹೇಳುವಂತೆ ಭಾರತದಲ್ಲಿ ಕೊರೋನಾ ಬಂದ ನಂತರ ಒಟ್ಟು 29 ಕೋಟಿ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕರ್ನಾಟಕ ರಾಜ್ಯವೊಂದರಲ್ಲೇ 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣದಿಂದ ಹೊರಗುಳಿದಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ರೀತಿ ಶಿಕ್ಷಣದಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಸವಾಲಿನ ಕೆಲಸ ಸರಕಾರದ ಮುಂದಿದೆ. ಆದರೆ ಸರಕಾರ ವಂಚಿತ ಮಕ್ಕಳನ್ನು ಶಾಲೆ ಸೇರಿಸುವ ಯೋಜನೆ ರೂಪಿಸುವ ಬದಲಾಗಿ ಶಿಕ್ಷಣದ ಸಾಮಾಗ್ರಿಗಳ ಮೇಲೆ ವಿಪರೀತ ಜಿಎಸ್‌ಟಿ ತೆರಿಗೆ ವಿಧಿಸಿರುವುದು ಸರಿಯಾದ ಕ್ರಮವಲ್ಲ,
ಈ ಎಲ್ಲಾ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶಿಕ್ಷಣದ ಸಾಮಾಗ್ರಿಗಳ ಮೇಲೆ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ಕೂಡಲೇ ವಾಪಾಸು ಪಡೆಯಬೇಕು ಮತ್ತು ಶಿಕ್ಷಣದ ಅಭಿವೃದ್ಧಿಗೆ ಒಟ್ಟು ರಾಷ್ಟ್ರೀಯ ಉತ್ಪನ್ನ ಜಿಡಿಪಿ ಶೇ. 6 ಅಥವಾ ಕೇಂದ್ರ ಬಜೆಟಿನಲ್ಲಿ ಶೇ. 10ರಷ್ಟು ಹಣವನ್ನು ಮೀಸಲಿಡಬೇಕೆಂದು ವಿದ್ಯಾರ್ಥಿ ಫೆಡರೇಶನ್ ಸಮಿತಿ ಸಮಿತಿಯ ಅಧ್ಯಕ್ಷರಾದ ವಿನಿತ್ ದೇವಾಡಿಗ, ಕಾರ್ಯದರ್ಶಿ ರೇವಂತ್ ಕದ್ರಿ ಕೇಂದ್ರ ಸರಕಾರವನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.
Kshetra Samachara
22/07/2022 08:12 pm