ಮುಲ್ಕಿ:ಮುಲ್ಕಿ ಸಮೀಪದ ಕೆರೆಕಾಡು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಅಷ್ಟಾವಧಾನ ಕಾರ್ಯಕ್ರಮದಲ್ಲಿ ಶನಿವಾರ ರಾಧಾಕೃಷ್ಣ ನೃತ್ಯ, ವೀಣಾ ವಾದನ ,ಭರತನಾಟ್ಯ, ಶಂಖನಾದ ,ಚೆಂಡೆ ಸೇವೆ ನಡೆದು ಮಹಾಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು
ಕಾರ್ಯಕ್ರಮದಲ್ಲಿ ಪುನರೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವರಾವ್, ಸಂದೀಪ್ ಕುಮಾರ್, ಸುರೇಂದ್ರ. ಬಿ .ಮಾಧವ ಶೆಟ್ಟಿಗಾರ್, ಅರ್ಚಕರಾದ ರಾಘವೇಂದ್ರ ರಾವ್, ಭಾಸ್ಕರ್ ಶೆಟ್ಟಿಗಾರ್, ಯೋಗಾನಂದ ಶೆಟ್ಟಿಗಾರ್, ವಸಂತ ಶೆಟ್ಟಿಗಾರ್, ಧನಂಜಯ ಕೊಲಕಾಡಿ, ಪಿ.ಆರ್ ರಾಜೇಶ್, ಚೇತನ್ ಉಪಸ್ಥಿತರಿದ್ದರು. ಜೂ.10ರಂದು ತಾಳಿಪಾಡಿ ಶ್ರೀ ಶನಿಕಥಾ ಸಂಕೀರ್ತನಾ ಮಂಡಳಿ ವತಿಯಿಂದ ಶನಿ ಕಥೆ ನಡೆಯಲಿದೆ.
Kshetra Samachara
10/07/2022 08:23 am