ಮುಲ್ಕಿ: ಕಿನ್ನಿಗೋಳಿ ಮುಲ್ಕಿ ರಾಜ್ಯ ಹೆದ್ದಾರಿ ಗೇರುಕಟ್ಟೆ ಬಳಿ ಅಪಾಯಕಾರಿ ಹೊಂಡ ವಾಹನ ಸವಾರರನ್ನು ಬಲಿಗಾಗಿ ಕಾಯುತ್ತಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ. ರಾಜ್ಯ ಹೆದ್ದಾರಿಯ ಗೇರುಕಟ್ಟೆ ಜಂಕ್ಷನ್ ಸದಾ ಜನನಿಬಿಡ ಪ್ರದೇಶವಾಗಿದ್ದು ಶಾಲಾ ವಾಹನ ಸಂಚರಿಸುವ ಹಾಗೂ ಮಕ್ಕಳು ನಡೆದುಕೊಂಡು ಹೋಗುವ ಸದಾ ಬ್ಯೂಸಿ ಪ್ರದೇಶವಾಗಿದೆ.
ಹೆದ್ದಾರಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದು ಬೃಹದಾಕಾರದ ಹೊಂಡ ಉಂಟಾಗಿ ಅವ್ಯವಸ್ಥೆಗಳ ಆಗರವಾಗಿದೆ
ಈ ಪರಿಸರದಲ್ಲಿ ದಾರಿದೀಪದ ಅವ್ಯವಸ್ಥೆ ಕೂಡ ಕಾಡುತ್ತಿದ್ದು ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಲೋಕೋಪಯೋಗಿ ಇಲಾಖೆಗೆ ದೂರು ಸಲ್ಲಿಸಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ. ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
22/06/2022 01:06 pm