ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದಾಮಸ್ಕಟ್ಟೆ ಬಳಿಯ ತುಡಮ ರಸ್ತೆಯಲ್ಲಿ ವಾಹನ ಸವಾರರು, ಬೈಕ್ ಸವಾರರು ಅಪರಿಚಿತರು ಎಸೆದಿರುವ ಕಸ ಒಂದು ಕಡೆ ರಸ್ತೆ ಪಕ್ಕ ರಾಶಿಬಿದ್ದಿರುವುದನ್ನು ಕಂಡು ಸಾಮಾಜಿಕ ಕಾರ್ಯಕರ್ತರಾದ ಲ. ಸ್ಟ್ಯಾನಿ ಪಿಂಟೊ ಹಾಗೂ ಮತ್ತಿತರರು ಕೂಡಲೇ ಕಿನ್ನಿಗೊಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ತಿಳಿಸಿ ತೆರವುಗೊಳಿಸುವಂತೆ ವಿನಂತಿಸಿದರು.
ಕೂಡಲೇ ಸ್ಪಂದಿಸಿದ ಮುಖ್ಯಾಧಿಕಾರಿ ಸಾಯಿಷ್ ಚೌಟ ಪೌರಕಾರ್ಮಿಕ ಸಿಬ್ಬಂದಿಗಳ ಮೂಲಕ ಕಸವನ್ನು ತೆರವುಗೊಳಿದ್ದಾರೆ
ಈ ಸಂದರ್ಭ ಲ. ಸ್ಟ್ಯಾನಿ ಪಿಂಟೊ ಮಾತನಾಡಿ ಸ್ವಚ್ಛ ಪರಿಸರಕ್ಕೆ ಒತ್ತುಕೊಡುವಂತ ಜನಸ್ನೇಹಿ ಅಧಿಕಾರಿಗಳು ಇದ್ದಲ್ಲಿ ಜನರ ಸಮಸ್ಯೆ ನಾಗರಿಕರ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ, ಕಿನ್ನಿಗೋಳಿ ಪರಿಸರದ ಸಾರ್ವಜನಿಕ ಪ್ರದೇಶದಲ್ಲಿ ಕಸ ಎಸೆಯುವವರ ಮಾಹಿತಿ ಕಂಡು ಬಂದಲ್ಲಿ ಮುಖ್ಯಾಧಿಕಾರಿಗಳು ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Kshetra Samachara
17/05/2022 09:49 pm