ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : ಮನೆಯ ದಾರಿಯ ವಿಚಾರ : ಅಪ್ರಾಪ್ತನ ಮೇಲೆ ಹಲ್ಲೆ

ಕುಂದಾಪುರ : ಗುಜ್ಜಾಡಿ ಮನೆಯ ದಾರಿಯ ವಿಚಾರದಲ್ಲಿ ಉಂಟಾಗಿರುವ ತಕರಾರಿನ ದ್ವೇಷದಿಂದ ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಹಲ್ಲೆ ನಡೆಸಿರುವ ಕುರಿತು ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಗುಜ್ಜಾಡಿ ಗ್ರಾಮದ ಉಮಾ ಗಾಣಿಗ ಎಂಬವರ ಮಗ ರಜತ್ (15) ಹಾಗೂ ಗಂಡನ ಅಣ್ಣನ ಮಗ ಸನತ್ ಎಂಬುವವರು ಸೈಕಲ್ ನಲ್ಲಿ ಕೊಡಪಾಡಿ ಪೇಟೆಗೆ ಕಡೆಗೆ ಹೋಗುತ್ತಿದ್ದ ವೇಳೆ,

ಗುಜ್ಜಾಡಿ ಗ್ರಾಮದ ಕೊಡಪಾಡಿ ಭಾಸ್ಕರ ಗಾಣಿಗರವರ ಮನೆಯ ಬಳಿ ತಲುಪುವಾಗ ದೇವೇಂದ್ರ, ದೇವಕಿ, ಅದ್ವಿತ್ ಹಾಗೂ ಅವನಿ ಎಂಬವರು ರಜತ್ ಹಾಗೂ ಸನತ್‌ನನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು, ಈ ರಸ್ತೆಯಲ್ಲಿ ತಿರುಗಾಡಬೇಡಿ ಎಂದು ಹೇಳಿ ಹೊಡೆದು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೆ ಇನ್ನು ಮುಂದಕ್ಕೆ ಈ ರಸ್ತೆಯಲ್ಲಿ ತಿರುಗಾಡಿದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿರುತ್ತಾರೆ ಎಂದು‌ ದೂರಿನಲ್ಲಿ ತಿಳಿಸಲಾಗಿದೆ.

ಉಮಾ ಗಾಣಿಗ ಹಾಗೂ ಆಪಾದಿತರಿಗೂ ಮನೆಯ ದಾರಿಯ ವಿಚಾರದಲ್ಲಿ ಈ ಮೊದಲೇ ತಕರಾರು ಇದ್ದು, ಅದೇ ದ್ವೇಷದಿಂದ ಇವರ ಮಗನ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

17/04/2022 02:50 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ