ಮುಲ್ಕಿ : ಮಹಿಳೆಯು ತನ್ನ ಸಾಮರ್ಥ್ಯವನ್ನು ಅಳೆದು ತೂಗಿ ಸಮಾಜದಲ್ಲಿ ಬೆಳೆಯಬೇಕು, ಮಹಿಳೆಗೆ ಎಂದಿಗೂ ತನ್ನಲ್ಲಿ ಕೀಳರಿಮೆ ಮೂಡಬಾರದು, ಮಹಿಳಾ ಮಂಡಲಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ಆಕೆಗೆ ಆಸರೆಯಾಗಿ ಬೆಳೆದಲ್ಲಿ ಸಮಾಜದಲ್ಲಿ ಸಂಸ್ಥೆಯ ಬಗ್ಗೆ ಗೌರವ ಹೆಚ್ಚುತ್ತದೆ ಎಂದು ಸಾಹಿತಿ, ಚಿಂತಕಿ ಎಚ್. ಶಕುಂತಲಾ ಭಟ್ ಹೇಳಿದರು.
ಹಳೆಯಂಗಡಿಯ ಯುವತಿ ಮತ್ತು ಮಹಿಳಾ ಮಂಡಳಿಯ ಸಂಯೋಜನೆಯಲ್ಲಿ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು.
ಮುಲ್ಕಿ ವಿಜಯಾ ಕಾಲೇಜಿನ ಉಪನ್ಯಾಸಕಿ ಡಾ. ಶೈಲಜ ವೈ.ವಿ., ಮಹಿಳಾ ದಿನಾಚರಣೆಯ ವಿಶೇಷತೆ ಮತ್ತು ಮಹಿಳೆಯ ಹಕ್ಕಿನ ಬಗ್ಗೆ ಮಾತನಾಡಿದರು. ಪಂಜದ ಗುತ್ತು ಶಾಂತಾರಾಮ ಶೆಟ್ಟಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶೆರ್ಲಿ ಸುಮಾಲಿನಿ ರವರು ಲಿಂಗ ಸಮಾನತೆಯ ಕುರಿತು ಅರಿವನ್ನು ಮೂಡಿಸಿದರು.
ಮಂಗಳೂರಿನ ನೆಹರು ಯುವ ಕೇಂದ್ರ, ಹಳೆಯಂಗಡಿಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಸಹಕಾರದೊಂದಿಗೆ ಕಾರ್ಯಕ್ರಮ ಜರಗಿತು. ವಿವಿಧ ಸ್ಪರ್ಧೆಯ ಬಹುಮಾನವನ್ನು ವಿತರಿಸಲಾಯಿತು.ಮಹಿಳಾ ಮಂಡಲದ ಅಧ್ಯಕ್ಷೆ ರೇಶ್ಯಾ ಸ್ವಾಗತಿಸಿದರು. ಯುವತಿ ಮಂಡಲದ ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷಿತ , ಯುವತಿ ಮಂಡಲದ ಅಧ್ಯಕ್ಷೆ ರಕ್ಷಿತಾ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
Kshetra Samachara
22/03/2022 06:59 pm