ಮುತ್ತೂರು:ದ.ಕ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು , ತಾಲೂಕು ಪಂಚಾಯತ್ ಮಂಗಳೂರು ಮತ್ತು ಮುತ್ತೂರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ 1 ಕೋಟಿ 72 ಲಕ್ಷ ಯೋಜನೆಯ ಜಲ ಜೀವನ್ ಮಿಷನ್ ಯೋಜನೆಯ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ 20 ಲಕ್ಷ ಅನುದಾನದ ಮೇಗಿನಮನೆ ರಸ್ತೆಯ ಗುದ್ದಲಿಪೂಜೆಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು
.
ಶಾಸಕ ಭರತ್ ಶೆಟ್ಟಿಯವರು ತಮ್ಮ ಅನುದಾನದಿಂದ ಕೊಳವೂರು ಬಲ್ಲಾಜೆ ನಿವೇಶನಕ್ಕೆ 19 ಲಕ್ಷ , ಕೊಳವೂರು ಗ್ರಾಮದ ಉದಯ್ ಕುಮಾರ್ ಕಂಬಳಿ ಮನೆ ಬಳಿ ರಸ್ತೆ ಕಾಂಕ್ರೀಟಿಕರಣಕ್ಕೆ 5 ಲಕ್ಷ , ಕೊಳವೂರು ಗ್ರಾಮದ ಹಸನಬ್ಬ ಮನೆ ಬಳಿ ರಸ್ತೆ ಕಾಂಕ್ರೀಟಿಕರಣಕ್ಕೆ 10 ಲಕ್ಷ , ಕೊಳವೂರು ಗ್ರಾಮದ ಕದ್ರಡಿ ಧೂಮಾವತಿ ರಸ್ತೆಗೆ ಡಾಮಾರಿಕರಣಕ್ಕೆ 2.5 ಲಕ್ಷ ಒಟ್ಟು 2 ಕೋಟಿ 28 ಲಕ್ಷದ 50 ಸಾವಿರ ರೂಪಾಯಿಗಳನ್ನು ತಮ್ಮ ಅನುದಾನದಿಂದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ನೀಡಿದ್ದಾರೆ .
ಕಾರ್ಯಕ್ರಮದಲ್ಲಿ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ , ಉಪಾಧ್ಯಕ್ಷೆ ಮಾಲತಿ ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/08/2021 06:10 pm