ಮುಲ್ಕಿ: ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಯಿಂದ ಸಂಸ್ಠೆಯ ಶ್ರೇಯೋಭಿವೃದ್ಧಿಗಾಗಿ ದುಡಿದ ದೂಜಮೂಲ್ಯರವರ ಸೇವೆ ಯುವ ಸಿಬ್ಬಂದಿಗಳಿಗೆ ಮಾದರಿಯಾಗಿದೆ ಎಂದು ಮುಲ್ಕಿವಿಜಯಾ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ ಹೇಳಿದರು.
ಮುಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘದ ಹಿರಿಯ ಸಿಬ್ಬಂದಿಯಾಗಿ 33ವರ್ಷಗಳ ಸೇವೆಯ ಬಳಿಕ ನಿವೃತ್ತಿಗೊಂಡ ದೂಜ ಮೂಲ್ಯರವರ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಿ ಮಾತನಾಡಿದರು. ಈ ಸಂದರ್ಭ ಮಾತನಾಡಿದ ದೂಜ ಮೂಲ್ಯ ಮಾತನಾಡಿ ಮಾತನಾಡಿ ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಶಿಸ್ತು ಬಹಳ ಅಗತ್ಯ. ಎಂದರು.
ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ನಿರ್ದೇಶಕರಾದ ತಿಮ್ಮಪ್ಪ ಶೆಟ್ಟಿ, ಗಂಗಾಧರ ಶೆಟ್ಟಿ, ನರಸಿಂಹ ಪೂಜಾರಿ, ರಾಜೇಶ್ ಶೆಟ್ಟಿ, ಪುಷ್ಪ ಮಡಿವಾಳ್ತಿ, ಪದ್ಮಿನಿ ವಿ ಶೆಟ್ಟಿ, ರಾಮನಾಯ್ಕ, ನಂಜುಂಡ, ದೇವಪ್ರಸಾದ್, ಅಶೋಕ್ ಕುಮಾರ್ ಹಾಗೂ ಸಂಘದ ಆಡಳಿತ ನಿರ್ದೇಶಕ ಜೇಸನ್ ಕ್ರಿಸ್ಟೋಫರ್ ಪುಟಾಡೊ ಹಾಗೂ ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖಾಧಿಕಾರಿ ಪ್ರಣಾಮ್ ಕುಮಾರ್ ರವರು ಉಪಸ್ಥಿತರಿದ್ದರು.
ಸಂಘದ ಪ್ರಭಂದಕ ಚಂದ್ರಕಾಂತ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
06/08/2021 02:51 pm