ಹಿರಿಯಡ್ಕ: ರಸ್ತೆ ಬದಿ ಕಸ ಹಾಕುವವರ ವಿರುದ್ಧ ಆತ್ರಾಡಿ ಗ್ರಾಮಸ್ಥರು ವಿಶಿಷ್ಟವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯಡ್ಕದ ಓಂತಿಬೆಟ್ಟು ಸಮೀಪ 169A ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಗಮನ ಸೆಳೆಯುವ ಬರಹದ ಫ್ಲೆಕ್ಸ್ ಅಳವಡಿಸುವ ಮೂಲಕ ರಸ್ತೆ ಬದಿ ಕಸ ಹಾಕುವವರಿಗೆ ಎಚ್ಚರಿಕೆ ನೀಡಿದ್ದಾರೆ.
ಇಲ್ಲಿ ಕಸ ಹಾಕಬೇಡ ಸೂ.... ಮಗನೇ ಎಂಬ ಬೈಗುಳದ ಬ್ಯಾನರ್ ಅಳವಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಹಿಂದೆ ದಯವಿಟ್ಟು ಇಲ್ಲಿ ಕಸ ಹಾಕಬೇಡಿ ಎಂಬ ಕೋರಿಕೆಯ ಬ್ಯಾನರ್ ಅಳವಡಿಸಲಾಗಿತ್ತು. ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿರಲಿಲ್ಲ. ಹೆದ್ದಾರಿಯ ಬದಿ ದಿನನಿತ್ಯ ಕಸ ಎಸೆದು ಹೋಗುತ್ತಿದ್ದರು. ಇದರಿಂದ ಆಕ್ರೋಶಿತರಾದ ಗ್ರಾಮಸ್ಥರು ಇದೀಗ ಬೈಗುಳದ ಬ್ಯಾನರ್ ಅಳವಡಿಸಿದ್ದಾರೆ. ಹೀಗಾಗಿ ಇಲ್ಲಿ ಕಸ ಎಸೆಯುವವರು ಧರ್ಮಕ್ಕೆ ಅನೈತಿಕ ಸಂಬಂಧಕ್ಕೆ ಹುಟ್ಟಿದ ಕೂಸು ಆಗುವುದು ಬೇಡವೆಂದು ಮುಂದಿನ ದಿನಗಳಲ್ಲಿ ಕಸ ಹಾಕುವುದನ್ನು ನಿಲ್ಲಿಸಬಹುದು. ಒಂದು ಮಾಹಿತಿಯ ಪ್ರಕಾರ ಈ ಬ್ಯಾನರ್ ಅಳವಡಿಸಿದ ಬಳಿಕ ಕಸ ಹಾಕುವುದು ಕಡಿಮೆಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
Kshetra Samachara
18/10/2020 12:28 pm