ಕುಂದಾಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಕುಂದಾಪುರ - 2 ಯೋಜನಾ ಕಚೇರಿ ವ್ಯಾಪ್ತಿಯ ಕಾಳವಾರ ವಲಯದ ಆಸೋಡು ಕಾರ್ಯಕ್ಷೇತ್ರದಲ್ಲಿ "ಶ್ರೀ ಮೂಕಾಂಬಿಕ" ಎನ್ನುವ ನೂತನ ಜ್ಞಾನವಿಕಾಸ ಕೇಂದ್ರ ಉದ್ಘಾಟನೆಗೊಂಡಿತು.
ಗ್ರಾಮ ಪಂಚಾಯತ್ ಸದಸ್ಯೆ ಪಾರ್ವತಿ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಚಂದ್ರ ಆಚಾರಿ ದಾಖಲಾತಿಯನ್ನು ಹಸ್ತಾಂತರಿಸಿದರು. ವಲಯದ ಮೇಲ್ವಿಚಾರಕ ದೀಪಕ್ ಪ್ರಾಸ್ತಾವಿಸಿದರು.
ಈ ಸಂದರ್ಭದಲ್ಲಿ ಜ್ಞಾನವಿಕಾಶ ಕೇಂದ್ರದ ಸದಸ್ಯರು ಹಾಜರಿದ್ದರು. ಸಮನ್ವಧಿಕಾರಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಶೇಖರ್ ಸ್ವಾಗತಿಸಿ ವಂದಿಸಿದರು.
Kshetra Samachara
01/10/2022 02:01 pm