ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೆಡಿಕಲ್ ಮಾಫಿಯಾಗೆ ಕಡಿವಾಣ ಹಾಕಿ; ಆರ್‌ಟಿಐ ಕಾರ್ಯಕರ್ತರಿಂದ ಧರಣಿ

ಜಿಲ್ಲೆಯಲ್ಲಿ ಅವ್ಯಾಹರವಾಗಿ ಮೆಡಿಕಲ್ ಮಾಫಿಯಾ ನಡೆಯುತ್ತಿದ್ದು ಆಯುರ್ವೇದಿಕ್ ವೈದ್ಯರುಗಳು ಆಲೋಪತಿ ಪದ್ಧತಿಯ ಔಷಧಿ ಕೊಡುತ್ತಿರುವುದು ಕಂಡು ಬಂದಿದೆ.ಇಂಥವರ ವಿರುದ್ಧ ಸಾಕ್ಷಿ ಸಮೇತ ದೂರು ನೀಡಿದರೂ ಪ್ರಯೋಜನವಾಗಿಲ್ಲ.ಈ ನಿಟ್ಟಿನಲ್ಲಿ ಸೋಮವಾರ ಡಿಸಿ ಕಚೇರಿ ಎದುರು ಅನಿರ್ಧಿಷ್ಠಾವಧಿ ಮುಷ್ಕರ ಹೂಡುವುದಾಗಿ ಆರ್‌ಟಿಐ ಕಾರ್ಯಕರ್ತ, ದಲಿತ ಮುಖಂಡ ಶೇಖರ್ ಹಾವಂಜೆ ಹೇಳಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು ,ಕೊರೋನಾ ಅವಧಿಯಲ್ಲಿ ಇಂತಹ ಕೆಲವು ವೈದ್ಯರಿಂದಾಗಿ ಸಾಕಷ್ಡು ರೋಗಿಗಳಿಗೆ ತೊಂದರೆಯಾದ ಉದಾಹರಣೆಗಳಿವೆ.ಈ ಸಂಬಂಧ ಉಡುಪಿ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಿದ್ದೇವೆ.ಆದರೆ ಈತನಕ ಕ್ರಮ ಆಗಿಲ್ಲ.ಇದರ ವಿರುದ್ಧ ಸಮಾನ ಮನಸ್ಕ ಸಂಘಟನೆಗಳು ಜೊತೆಯಾಗಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗ ಅನಿರ್ಧಿಷ್ಠಾವಧಿ ಧರಣಿ ನಡೆಸುವುದಾಗಿ ಅವರು ಹೇಳಿದ್ದಾರೆ.

Edited By :
Kshetra Samachara

Kshetra Samachara

15/06/2022 03:37 pm

Cinque Terre

8.37 K

Cinque Terre

0

ಸಂಬಂಧಿತ ಸುದ್ದಿ