ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಸಾವಿರಾರು ಮತಗಳ ಅಂತರದಲ್ಲಿ ಗೆದ್ದವನಿಗೆ ಸೀಮಂತ ಕಾರ್ಯಕ್ರಮದ ರಾಜಕೀಯ ಲಾಭ ಅಗತ್ಯವಿಲ್ಲ; ಶಾಸಕ ಖಾದರ್

ಉಳ್ಳಾಲ: ಚುನಾವಣೆಯಲ್ಲಿ ಇಪ್ಪತ್ತು, ಮೂವತ್ತು ಸಾವಿರ ಮತಗಳ ಅಂತರದಲ್ಲಿ ಗೆದ್ದವನಿಗೆ ಸಾಮೂಹಿಕ ಸೀಮಂತದಲ್ಲಿ ರಾಜಕೀಯ ಲಾಭ ಪಡೆಯುವ ಅಗತ್ಯತೆ ಇಲ್ಲ. ನಾಲ್ಕು ಜನ ಬಂದು ಬೊಬ್ಬೆ ಹೊಡೆದರೆ ಇಂತಹ ಮಾದರಿ ಕಾರ್ಯಕ್ರಮದ ಬಗ್ಗೆ ಊರಿಗೆ ಢಂಗುರ ಬಾರಿಸಿದಂತಾಯ್ತು ಅವರಿಗೆ ನನ್ನ ಅಭಿನಂದನೆ ಎಂದು ಭಜರಂಗದಳದ ಕಾರ್ಯಕರ್ತರಿಗೆ ಶಾಸಕ ಯು.ಟಿ ಖಾದರ್ ಟಾಂಗ್ ನೀಡಿದ್ದಾರೆ.

ಪೋಷಣ್ ಮಾಸಾಚರಣೆ ಪ್ರಯುಕ್ತ ಬುಧವಾರದಂದು ಕೊಲ್ಯದ ನಾರಾಯಣ ಗುರು ಸಭಾಭವನದಲ್ಲಿ ನಡೆದ ಅನ್ನಪ್ರಾಶನ, ಪೌಷ್ಟಿಕ ಆಹಾರ ,ಶಿಶು ಪ್ರದರ್ಶನ ಹಾಗೂ ಸಾಮೂಹಿಕ ಸೀಮಂತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸಭಾಂಗಣದ ಹೊರಗೆ ಹಾಕಲಾಗಿದ್ದ ಫ್ಲೆಕ್ಸಲ್ಲಿ ಶಾಸಕ ಯು.ಟಿ ಖಾದರ್, ಅವರ ಪಕ್ಕದಲ್ಲಿ ಸ್ಥಳೀಯ ಹಿಂದೂ ಕಾರ್ಯಕರ್ತನ ಸಹೋದರಿ ಗರ್ಭಿಣಿಯಾಗಿದ್ದ ಭಾವಚಿತ್ರವನ್ನ ಅನುಮತಿ ಇಲ್ಲದೆ ಜಾಲತಾಣದಿಂದ ನಕಲು ಮಾಡಿ ಮುದ್ರಿಸಿದ್ದರು. ಇದರ ವಿರುದ್ಧ ಭಜರಂಗದಳದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದ ಪರಿಣಾಮ ಕಾರ್ಯಕ್ರಮ ಆಯೋಜಕರು ಫ್ಲೆಕ್ಸನ್ನ ತೆರವುಗೊಳಿಸಿದ್ದರು.

ಪ್ರತಿಭಟಿಸಿದ ಭಜರಂಗದಳ ಕಾರ್ಯಕರ್ತರಿಗೆ ಖಾದರ್ ಪರೋಕ್ಷವಾಗಿ ಟಾಂಗ್ ನೀಡಿದರು. ಕಾರ್ಯಕ್ರಮದಲ್ಲಿ ಅವರು ಮಕ್ಕಳಿಗೆ ಅನ್ನಪ್ರಾಶನ‌ ನಡೆಸಿದರು. ಸುಮಂಗಳೆಯರಿಂದ ಗರ್ಭಿಣಿಯರಿಗೆ ಬಾಗಿನ, ಫಲ, ಪುಷ್ಪ, ಉಡುಗೊರೆ, ಆರತಿ ಎತ್ತಿ ಸಾಮೂಹಿಕ ಸೀಮಂತ ನಡೆಸಲಾಯಿತು.

Edited By : Shivu K
PublicNext

PublicNext

28/09/2022 10:04 pm

Cinque Terre

60.73 K

Cinque Terre

6

ಸಂಬಂಧಿತ ಸುದ್ದಿ