ಮಂಗಳೂರು: ಮಲಪ್ರಭಾ ಕಾಲುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ.ಬಿ ಪಾಟೀಲ್ ವಿರುದ್ಧ ನಳಿನ್ ಕುಮಾರ್ ಕಟೀಲ್ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಈ ಭ್ರಷ್ಟಾಚಾರದ ಆರೋಪದ ವಿರುದ್ಧ ಅವರಿಗೆ ಕಾನೂನು ಪ್ರಕಾರ ನೋಟೀಸ್ ಜಾರಿ ಮಾಡಿ ಸೂಕ್ತ ಕ್ರಮಕ್ಕಾಗಿ ಕಾನೂನು ಹೋರಾಟ ನಡೆಸುವುದಾಗಿ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಇಲಾಖೆ ಗಳಲ್ಲಿ ಶೇ 40 ಕಮಿಷನ್ ಪಡೆಯಲಾಗಿದೆ ಎಂದು ಗುತ್ತಿಗೆ ದಾರರು ಪ್ರಧಾನಿ ಮೋದಿಗೆ ನೀಡಿದ ದೂರಿನ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಯಲಿ. ರಾಜ್ಯದಲ್ಲಿ 40 ಶೇ. ಕಮೀಷನ್ ಪಡೆಯುವ ಆರೋಪ ಹೊಂದಿರುವ ಇಲಾಖೆಗಳ ಮೇಲೆ ಐ.ಟಿ, ಇ.ಡಿ ದಾಳಿ ಏಕೆ ನಡೆಯುತ್ತಿಲ್ಲ. ಮೋದಿ ಅಧಿಕಾರಕ್ಕೆ ಬರುವ ಮೊದಲು ದೇಶದ ಜನಕ್ಕೆ ಅಚ್ಛೇದಿನ ಇತ್ತು ಈಗ ಇಲ್ಲ ಎನ್ನುವು ದನ್ನು ದೇಶದ ಜನ ಹೇಳುತ್ತಿದ್ದಾರೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶ ಯುವ ಜನರಿಗೆ ಭ್ರಮ ನಿರಸನ ವಾಗಿದೆ. ಸಾಕಷ್ಟು ಕಂಪೆನಿಗಳು ಖಾಸಗಿಯವರ ಪಾಲಾಗಿದೆ. ನಿರುದ್ಯೋಗದ ಪ್ರಮಾಣ ಏರಿಕೆ ಯಾಗಿದೆ. ಜನ ಸಾಮಾನ್ಯರ ನಿತ್ಯ ಬಳಕೆಯ ಪೆಟ್ರೋಲ್, ಅಡುಗೆ ಅನಿಲ, ಖಾದ್ಯ ತೈಲದ ಬೆಲೆ ಗಗನಕ್ಕೇರಿದೆ. ಮೋದಿ ವರ್ಷ ಕ್ಕೆ ಎರಡು ಕೋಟಿ ಉದ್ಯೋಗ ನೀಡುವ ಭರವಸೆ ಈಡೇರಿಸಿಲ್ಲ ಎಂದರು.
PublicNext
26/09/2022 03:58 pm