ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: "ಲ್ಯಾಂಡ್ ಮಾಫಿಯಾದಿಂದ ಭೂಸ್ವಾಧೀನ ಬಗ್ಗೆ ಗೊಂದಲ ಸೃಷ್ಟಿ, ಜೀವ ಬೆದರಿಕೆ"

ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ, ಕೊಲ್ಲೂರು, ಉಳೆಪಾಡಿ ಪ್ರದೇಶಗಳಲ್ಲಿ ಭೂಸ್ವಾಧೀನ ತಡೆಗೆ ಸಂಸದ ಹಾಗೂ ಶಾಸಕರ ಆದೇಶದ ಹೊರತಾಗಿಯೂ ಲ್ಯಾಂಡ್ ಮಾಫಿಯಾಗಳು ಸುಳ್ಳು ಸುದ್ದಿ ಹಬ್ಬಿಸಿ ನಾಗರಿಕರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಳ್ಕುಂಜೆ ಭೂ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡೆನ್ನಿಸ್ ಡಿಸೋಜ ಹೇಳಿದರು.

ಅವರು ಕಿನ್ನಿಗೋಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸರ್ವೆ ಕಾರ್ಯಕ್ಕೆ ಮೂರು ಗ್ರಾಮಗಳ 172 ಕುಟುಂಬಗಳಲ್ಲಿ 145 ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದು ಈ ಬಗ್ಗೆ ದಾಖಲೆಗಳು ನಮ್ಮ ಬಳಿ ಇದೆ. ಕೊಲ್ಲೂರು ಶೇ. 95 ಉಳೆಪಾಡಿ ಶೇ. 85 ಮತ್ತು ಬಳಕುಂಜೆಯಲ್ಲಿ ಶೇ.80 ಜನರ ವಿರೋಧವಿದೆ. ಆದರೂ ಕೆಲವರು ಈ ಬಗ್ಗೆ ಅಪಪ್ರಚಾರ ನಡೆಸಿ ಸಭೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಬೆದರಿಸುತ್ತಿದ್ದಾರೆ ಎಂದರು.

ಲ್ಯಾಂಡ್ ಮಾಫಿಯಾ ಕುಳಗಳು ಈ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿ ರೈತರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸರಣಿ ಸಭೆ ನಡೆಸಿ ಜನ ಬೆಂಬಲವಿಲ್ಲದೆ ಮುಖಭಂಗವಾಗಿರುವುದು ಮಾತ್ರವಲ್ಲದೆ, ಶತಾಯ ಗತಾಯ ಭೂಸ್ವಾಧೀನ ಆಗಲೇ ಬೇಕು ಎಂದು ಹಠಕ್ಕೆ ಒಳಗಾಗಿದ್ದಾರೆ ಎಂದರು.

ಕಾರ್ಯದರ್ಶಿ ಪ್ರೀಡಾ ರೋಡ್ರಿಗಸ್ ಮಾತನಾಡಿ, ಭೂ ಸ್ವಾಧೀನ ಬಗ್ಗೆ ನಾವು ಜಿಲ್ಲಾಧಿಕಾರಿಯವರನ್ನು ಭೇಟಿಯಾದಾಗ ಗ್ರೀನ್ ಅಮೋನಿಯಾ ಹೈಡ್ರೋಜನ್ ಕಂಪನಿ ಎಂದು ತಿಳಿಸಿದ್ದರು. ಇದರಲ್ಲಿ ನಮ್ಮ ನೆಲ- ಜಲ ನಾಶವಾಗುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸುವವರ ವಿರುದ್ಧ ಅಲ್ಲದೆ, ಭೂಸ್ವಾಧೀನಗೊಳ್ಳಬೇಕು ಎನ್ನುವವರ ವಿರುದ್ಧವೂ ಪ್ರತಿಭಟನೆ ನಡೆಸಲಾಗುವುದು ಎಂದರು.

ಈ ಸಂದರ್ಭ ಬಳಕುಂಜೆ ಪಂಚಾಯತ್ ಅಧ್ಯಕ್ಷೆ ಮಮತಾ ಪೂಂಜ, ಮಾಜಿ ಅಧ್ಯಕ್ಷ ದಿನೇಶ್ ಪುತ್ರನ್, ಐಕಳ ಪಂಚಾಯತ್ ಮಾಜಿ ಅಧ್ಯಕ್ಷ ದಿವಾಕರ ಚೌಟ, ಐತಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

09/09/2022 10:27 pm

Cinque Terre

7.17 K

Cinque Terre

1

ಸಂಬಂಧಿತ ಸುದ್ದಿ