ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕ ಅರವಿಂದ ಲಿಂಬಾವಳಿ ಕೇಸ್ : ಬಿಜೆಪಿ ಸ್ತ್ರೀ ವಿರೋಧಿ ಧೋರಣೆ..ಕಾಂಗ್ರೆಸ್ ಆರೋಪ

ಕಾರ್ಕಳ : ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪರಿಹಾರ ಕೇಳಲು ಬಂದ ಮಹಿಳೆಯನ್ನು ಅವಾಚ್ಯ ಪದಗಳಿಂದ ನಿಂದಿಸಿರುವುದು ಬಿಜೆಪಿಯ ಸ್ತ್ರೀ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರ ಪಾಲ್ ಹೇಳಿದ್ದಾರೆ.

ಮಹಿಳೆಯರನ್ನು ನಿಂದಿಸುವ ಚಾಳಿ ಬಿಜೆಪಿ ನಾಯಕರಿಗೆ ಹೊಸತಲ್ಲ. ಇದು ಇವರ ರಾಜಕೀಯ ಸಂಸ್ಕೃತಿ. ಈ ಪಕ್ಷದಿಂದ ಮಹಿಳೆಯರು ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲಾಗದು,ಜನರ ದು:ಖ ದುಮ್ಮಾನಗಳಿಗೆ ಸ್ಪಂದಿಸ ಬೇಕಾದ ಶಾಸಕನಾದವನ ಕರ್ತವ್ಯ. ಅದುಬಿಟ್ಟು ಮನವಿ ಹಿಡಿದು ಬಂದ ಸಂತ್ರಸ್ಥೆಯನ್ನು ಅವ್ಯಾಚ್ಯ ಭಾಷೆಯಿಂದ ನಿಂದಿಸಿದ್ದು ಮಾತ್ರವಲ್ಲದೇ ಇದನ್ನು ಪ್ರಶ್ನಿಸಿದ ಮಾಧ್ಯಮದವರಲ್ಲಿ ನಾನೇನು ಅವಳ ರೇಪ್ ಮಾಡಿದ್ದೇನೆಯೇ ಎಂದು ಮರು ಪ್ರಶ್ನೆ ಮಾಡಿ ದರ್ಪ ತೋರಿದ್ದು ಇವರ ವಿಕೃತ ಮನೋಭಾವಕ್ಕೆ ಸಾಕ್ಷಿಯಾಗಿದೆ ಇದು ಎಂದು ವಾಗ್ದಾಳಿ ನಡೆಸಿದ್ದಾರೆ.

ಜನರ ಸಮಸ್ಯೆಗಳನ್ನು ಕೇಳುವಷ್ಟು ಸಹನೆ ಇಲ್ಲದ ಈ ಮನುಷ್ಯ ಕೂಡಲೇ ತನ್ನ ಶಾಸಕನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದಿದೆ. ದೂರು ನೀಡಿದ ಸಂತ್ರಸ್ಥೆಯ ವಿರುದ್ಧವೇ ಪೊಲೀಸರ ಮೂಲಕ ಕೇಸು ದಾಖಲಿಸಿರುವುದು ಖಂಡನೀಯ. ತನ್ನ ಕ್ಷೇತ್ರದ ಶಾಸಕನಲ್ಲಿ ತನಗಾದ ಅನ್ಯಾಯದ ಬಗ್ಗೆ ಮನವಿ ನೀಡುವುದು ಮತ್ತು ಮನವಿಗೆ ಸ್ಪಂದಿಸುವಂತೆ ಒತ್ತಾಯಿಸುವುದು ಪ್ರಜೆಯೊಬ್ಬನ ಹಕ್ಕು.

ಪ್ರಜಾತಂತ್ರ ವ್ಯವಸ್ಥೆಯಡಿಯಲ್ಲಿ ಅದನ್ನು ಯಾವುದೇ ಕಾರಣಕ್ಕೂ ಶಾಸಕನ ಕರ್ತವ್ಯಕ್ಕೆ ಅಡ್ಡಿ ಎಂದು ಪರಿಗಣಿಸಲಾಗದು. ಆದರೆ ಈ ಪ್ರಕರಣದಲ್ಲಿ ಪೊಲೀಸರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದರೂ ಶಾಸಕ ಲಿಂಬಾವಳಿ ಆದೇಶವನ್ನು ಪರಿಗಣಿಸಿ ಸಂತ್ರಸ್ಥೆಯ ಮೇಲೆ ಕೇಸ್ ಹಾಕಿರುವುದು ಖಂಡನೀಯ ಎಂದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

06/09/2022 06:44 pm

Cinque Terre

3.2 K

Cinque Terre

1

ಸಂಬಂಧಿತ ಸುದ್ದಿ