ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ ತಾಲೂಕು ಆಡಳಿತ ಸೌಧದ ಶಿಲಾನ್ಯಾಸಕ್ಕೆ ಭರದ ಸಿದ್ಧತೆ

ಮುಲ್ಕಿ: ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮುಲ್ಕಿಯ ಕಾರ್ನಾಡ್ ಗೇರುಕಟ್ಟೆ ಬಳಿ ನಿರ್ಮಾಣಗೊಳ್ಳಲಿರುವ ಮುಲ್ಕಿ ತಾಲೂಕು ಆಡಳಿತ ಸೌಧವನ್ನು ಆ.27ರಂದು ವಸತಿ ಸಚಿವ ವಿ. ಸೋಮಣ್ಣ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.

ಮುಲ್ಕಿ ಮೂಡುಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮಂಡಲಾಧ್ಯಕ್ಷ ಸುನಿಲ್ ಆಳ್ವ ನೇತೃತ್ವದಲ್ಲಿ ಆಡಳಿತ ಸೌಧ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಜೆಸಿಬಿ ಮೂಲಕ ಸ್ವಚ್ಛತೆ ಕಾಮಗಾರಿ ಭರದಿಂದ ನಡೆಯುತ್ತಿದೆ.

ಈಗಾಗಲೇ ಮುಲ್ಕಿ ತಾಲ್ಲೂಕು ಕಡತದಲ್ಲಿ ಘೋಷಣೆಯಾಗಿದ್ದು, ನೂತನವಾಗಿ ನಿರ್ಮಾಣವಾಗಲಿರುವ ಆಡಳಿತ ಸೌಧದಲ್ಲಿ ಶಾಸಕರ ಕಚೇರಿ, ತಹಶೀಲ್ದಾರ್, ಸರ್ವೇಯರ್ ಸಹಿತ 27 ವಿವಿಧ ಇಲಾಖೆಯ ಕಚೇರಿಗಳು ಒಳಗೊಂಡಿದೆ. ಮುಲ್ಕಿಯ ಆಡಳಿತ ಸೌಧವನ್ನು ಮುಂದಿನ 1.5 ವರ್ಷದಲ್ಲಿ ನಿರ್ಮಿಸಲಾಗುವುದು ಈಗಾಗಲೇ ಶಾಸಕ ಉಮನಾಥ ಕೋಟ್ಯಾನ್ ಹೇಳಿದ್ದು, ಮುಲ್ಕಿಯ ಕಾರ್ನಾಡ್ ಬೈಪಾಸ್‌ನಲ್ಲಿ 3 ಕೋಟಿ ರೂ. ಮತ್ತು ಮೂಡಬಿದಿರೆಯಲ್ಲಿ 4 ಕೋಟಿ ರೂ. ವೆಚ್ಚದ ಪ್ರವಾಸಿ ಮಂದಿರಕ್ಕೆ ಶಿಲಾನ್ಯಾಸ ಹಾಗೂ ಸುಮಾರು 5 ಕೋಟಿ ರೂ. ವೆಚ್ಚದ ಮೂಡಬಿದಿರೆಯ ಚತುಷ್ಪಥ ರಸ್ತೆಗೆ ಶಿಲಾನ್ಯಾಸವನ್ನು ಇದೇ ಸಂದರ್ಭದಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟಿಲ್ ನೆರವೇರಿಸಲಿದ್ದಾರೆ.

ಮುಲ್ಕಿ ಇತಿಹಾಸದಲ್ಲಿಯೇ ವಿನೂತನ ಕಾರ್ಯಕ್ರಮವಾಗಿ ಚರಿತ್ರೆಗೆ ಸೇರುವುದರಿಂದ ತಾಲ್ಲೂಕಿನಿಂದ ಸುಮಾರು 2,000 ಮಂದಿ ಭಾಗವಹಿಸಲಿದ್ದು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಆಡಳಿತ ಸೌಧ ಕೇಂದ್ರ ಬಿಂದುವಾಗಲಿದೆ. ಆಗಸ್ಟ್ 27ರ ಕಾರ್ಯಕ್ರಮಕ್ಕೆ ಈಗಾಗಲೇ ಮುಲ್ಕಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು ಅಲ್ಲಲ್ಲಿ ಸಚಿವರಿಗೆ, ಶಾಸಕರಿಗೆ ಸ್ವಾಗತ ಕೋರುವ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.

Edited By :
Kshetra Samachara

Kshetra Samachara

25/08/2022 12:13 pm

Cinque Terre

5.04 K

Cinque Terre

0

ಸಂಬಂಧಿತ ಸುದ್ದಿ