ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜಾತ್ಯಾತೀತ ಒಕ್ಕೂಟದಿಂದ ಜಿಲ್ಲಾಧಿಕಾರಿ ಭೇಟಿ, ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಜಾತ್ಯಾತೀತ ಒಕ್ಕೂಟ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದೆ. ಹಲವು ಪಕ್ಷಗಳ, ಸಂಘಟನೆಗಳ ಮುಖಂಡರ ಒಕ್ಕೂಟ ಜಿಲ್ಲೆಯ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರಿಗೆ ಒಕ್ಕೂಟದ ಮನವಿ ಸಲ್ಲಿಸಿದರು.

ಅಹಿತಕರ ಘಟನೆಗಳ ಹಿಂದೆ ಇರುವ ಪಿತೂರಿದಾರ ಬಂಧನ ಆಗಬೇಕಿದೆ, ಜನ ಸಾಮಾನ್ಯರಿಗೆ ಅವರು ಯಾರೆಂದು ಗೊತ್ತಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಆಸ್ತಿ ಮುಟ್ಟುಗೋಲು, ಎನ್.ಐ.ಎ ತನಿಕೆ ಎಲ್ಲಾ ಪ್ರಕರಣಗಳಲ್ಲೂ ಆಗಬೇಕು ಕಾರ್ಯಾಂಗದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಜಿಲ್ಲೆಯಲ್ಲಿ ಕೋಮು ದ್ವೇಶ ಪರಾಕಷ್ಟೆಗೆ ತಲುಪಿದೆ ಇದನ್ನ ಈಗಲೇ ಮಟ್ಟ ಹಾಕದೇ ಇದ್ರೆ ಮುಂದಿನ ದಿನ ಸಂಕಷ್ಟವಿದೆ. ಹಿಜಾಬ್ ವಿವಾದ ಆರಂಭ ಆದಾಗಲೇ ಜಿಲ್ಲಾಡಳಿತವನ್ನು ಎಚ್ಚರಿಸಿದ್ದೆವು, ಆದರೆ ಇದೇ ಘಟನೆ ಮುಂದುವರೆದು ಸರಣಿ ಕೊಲೆಗೆ ಕಾರಣವಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಂತೆ ಉಳಿದ ಪ್ರಕರಣವನ್ನೂ ಪರಿಗಣಿಸಬೇಕು. ಫಾಸೀಲ್ ಮತ್ತು ಮಸೂದ್ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಫಾಸೀಲ್ ಕೊಲೆ ಪ್ರಕರಣದಲ್ಲಿ ಭಾಗಿಯಾದವ ಹಿಂದೆ ಮೂರು ಕೊಲೆ ನಡೆಸಿದ್ದಾನೆ.

ಮೂರು ಕೊಲೆ ಮಾಡಿದ ಆ ಆರೋಪಿ ಒಂದು ಪಕ್ಷದ ಕಾರ್ಯಕರ್ತ ಅದೇ ಆರೋಪಿಯಿಂದ ಸುರತ್ಕಲ್ ಫಾಸೀಲ್ ಕೊಲೆ ನಡೆದಿದೆ. ಇಂತಹ ಕ್ರಿಮಿನಲ್ ಗಳು ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದ್ರೆ ಜಿಲ್ಲಾಡಳಿತ ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ ನೀಡಿದ್ರು

ಒಕ್ಕೂಟದ ಮುಖಂಡರಿಗೆ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ ಯಾವುದೇ ರೀತಿಯ ಕೋಮು ಸೌಹಾರ್ದ ಕದಡದಂತೆ ಕ್ರಮ ಜಿಲ್ಲಾಡಳಿತ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಕೆಲವೊಂದು ತಪ್ಪುಗಳಾಗಿದ್ರೆ ಅದನ್ನೂ ಜಿಲ್ಲಾಡಳಿತ ಸರಿಪಡಿಸಲಿದೆ. ಮಸೂದ್ ಹಾಗೂ ಫಾಸೀಲ್ ಕುಟುಂಬಕ್ಕೆ ಪರಿಹಾರ ವಿಚಾರ

ಸಿಎಂ ಪರಿಹಾರ ನಿಧಿಯಿಂದ ಹಣ ಬಿಡುಗಡೆ ಆಗಬೇಕು. ಮನವಿ ಸಲ್ಲಿಸಿದ್ರೆ ಸರ್ಕಾರಕ್ಕೆ ಮನವಿಯನ್ನು ಕಳುಹಿಸಲಾಗುವುದು ಎಂದರು..

Edited By : Shivu K
Kshetra Samachara

Kshetra Samachara

19/08/2022 04:21 pm

Cinque Terre

6.46 K

Cinque Terre

0

ಸಂಬಂಧಿತ ಸುದ್ದಿ