ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಟ್ಕಳ:ಗುಡ್ಡ ಕುಸಿದ ಭಟ್ಕಳ ತಾಲೂಕಿನ ಪ್ರದೇಶಗಳಿಗೆ ಸಚಿವ ಕೋಟ ಭೇಟಿ,ಸಾಂತ್ವನ

ಭಟ್ಕಳ: ಮಂಗಳವಾರ ಮುಂಜಾನೆ ಗುಡ್ಡ ಕುಸಿದು ಅವಘಡಕ್ಕೀಡಾದ ಭಟ್ಕಳ ತಾಲೂಕು ಮುಠ್ಠಳ್ಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇಂದು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಸಂತ್ರಸ್ತರಿಗೆ ಶೀಘ್ರ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಪ್ರಕೃತಿ ವಿಕೋಪ ಸಂಭವಿಸಬಹುದಾದ ಕಡೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ರು.

ಆಲ್ಲದೆ ತೀವ್ರ ಮಳೆ ಹಾನಿಗೊಳಗಾದ ತಾಲೂಕಿನ ಮುಂಡಳ್ಳಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ ವೀಕ್ಷಿಸಿದರು.

ಶಾಸಕ ಸುನೀಲ್ ನಾಯ್ಕ್ ಸೇರಿದಂತೆ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

02/08/2022 09:45 pm

Cinque Terre

21.02 K

Cinque Terre

2

ಸಂಬಂಧಿತ ಸುದ್ದಿ