ಉಡುಪಿ: ನಿಯಮಕ್ಕೆ ವಿರುದ್ಧವಾದ ಹಿಜಾಬ್ ತಪ್ಪಾಗಲಿಲ್ಲ. ಆದರೆ ನಮ್ಮ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿದ್ದೇ ತಪ್ಪಾಯ್ತಾ? ಕೇಸರಿ ಅಂದರೆ ಕೆಲವರಿಗೆ ಬಹಳ ತುರಿಕೆ ಎಂದು ಕಾಂಗ್ರೆಸ್ ಮತ್ತು ಪ್ರಗತಿಪರರಿಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಟಾಂಗ್ ನೀಡಿದ್ದಾರೆ.
ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಉಗ್ರ ಭಾಷಣ ಮಾಡಿದ ಕಲ್ಲಡ್ಕ ,ಆಕ್ಷನ್ ಗೆ ರಿಯಾಕ್ಷನ್ ತೋರಿಸದೆ ಹಿಂದೂ ಸಮಾಜ ಸೋತಿದೆ.ಹೊಡೆದರೂ ಬಡಿದರೂ ಹಿಂದೂಗಳು ಸುಮ್ಮನಿರಬೇಕಂತೆ. ಇನ್ನು ಹಿಂದೂಗಳು ಸುಮ್ಮನೆ ಕುಳಿತುಕೊಳ್ಳಬೇಕು ಎಂದರೆ ಸಾಧ್ಯವಿಲ್ಲ.ಹಿಂದೂ ಸಮಾಜ ರಿಯಾಕ್ಷನ್ಸ್ ತೋರಿಸುವ ಅಗತ್ಯ ಇದೆ.ನಾವು ರಿಯಾಕ್ಷನ್ ತೋರಿಸಿದ್ದರಿಂದ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಎಂದು ಹೇಳಿದ್ದಾರೆ.
ಹಿಜಾಬ್ ಒಂದು ಕೇವಲ ಬಟ್ಟೆ, ಹೋರಾಟ ಅಲ್ಲ.ಇನ್ನೊಂದು ದೇಶವಿಭಜನೆಯ ಹುನ್ನಾರ ಇದರಲ್ಲಿದೆ.ಜಗತ್ತಿನ ಸರ್ವಶ್ರೇಷ್ಠ ಜೀವನಪದ್ಧತಿ ಇರುವುದು ಹಿಂದೂಧರ್ಮದಲ್ಲಿ ಮಾತ್ರ. ಸರ್ವಧರ್ಮ ಸಮ್ಮೇಳನ ಎಂಬ ಶಬ್ದವೇ ಸರಿಯಲ್ಲ ಎಂದ ಅವರು ,
ಮುಸಲ್ಮಾನರು, ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳೋದು ನಾಚಿಗೇಡು.ಒಂದು ದೇವರನ್ನು ಪೂಜೆ ಮಾಡಿ ಅಂತ ಹೇಳುವುದು ಧರ್ಮವಾಗಲು ಸಾಧ್ಯವಿಲ್ಲ.
ಒಂದೇ ದೇವರು ಎನ್ನುವ ಕ್ರೈಸ್ತ ಮತ್ತು ಇಸ್ಲಾಂ ಧರ್ಮವಾಗಲು ಸಾಧ್ಯವಿಲ್ಲ.ನಿಯಮ ಪಾಲಿಸದವರನ್ನು ಕತ್ತರಿಸುವ ಮತ ಧರ್ಮವಾಗಲು ಸಾಧ್ಯವಿಲ್ಲ. ಒಪ್ಪಿಕೋ.. ಮತಾಂತರ ಆಗು ಇಲ್ಲದಿದ್ದರೆ ಓಡಿಹೋಗು ಎಂಬ ನಿಯಮ ಇರುವ ಧರ್ಮ ಧರ್ಮವೇ ಅಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
PublicNext
09/06/2022 05:48 pm