ಉಡುಪಿ: ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಹಾಗೂ ಶ್ರೀರಾಮ ಸೇವಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಲೆ ಕಡಿದರೆ ತಲಾ ಹತ್ತು ಲಕ್ಷ ಹಣ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿಯ ಬಿಡಲಾಗಿದೆ.
ಮಾರಿಗುಡಿ ಹೆಸರಿನ ಇನ್ ಸ್ಟಾ ಪೇಜ್ ನಲ್ಲಿ ಕೊಲೆ ಪ್ರಚೋದನೆ ಪೋಸ್ಟ್ ಮಾಡಿ, ಇಬ್ಬರ ತಲೆ ಕಡಿದರೆ ಇಪ್ಪತ್ತು ಹಣ ಲಕ್ಷ ಹಣ ನೀಡುವುದಾಗಿ ಬರೆಯಲಾಗಿದೆ.
ಸದ್ಯ ಈ ಪೋಸ್ಟ್ ವೈರಲ್ ಆಗಿ, ಬಿಜೆಪಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಹತ್ಯೆ ಮಾಡುವ ಬೆದರಿಕೆ ಪೋಸ್ಟ್ ಮಾಡಿರುವ ಇನ್ಸ್ಟಾಗ್ರಾಮ್ ಖಾತೆಯ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಇವತ್ತು ಹಿಂದೂ ಸಂಘಟನೆಗಳು ಎಸ್ಪಿಗೆ ಮನವಿ ನೀಡಿದವು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಶ್ಪಾಲ್ ಸುವರ್ಣ, ಪೇಜ್ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ,ಆದರೆ ನನ್ನ ತಲೆಗೆ ಬೆಲೆ ಕಟ್ಟಿದವ ಯಾರೆಂದು ಗೊತ್ತಾದರೆ ಸಂತೋಷವಾಗುತ್ತೆ. ನನ್ನ ಬೆಲೆ ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ, ದುಡಿದು ತಿನ್ನುವವನು. ನಾನು ದೇಶ, ರಾಷ್ಟ್ರೀಯತೆ ವಿಚಾರದಲ್ಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ.ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಮಾರಕ ಎಂದು ಹೋರಾಟ ಮಾಡಿದ್ದೇನೆ.ಹಿಜಾಬ್ ವಿಚಾರವಾಗಿ ಬೆದರಿಕೆ ಹಾಕಲಿ, ಹಾಕದೆ ಇರಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
08/06/2022 05:35 pm