ಹೆಬ್ರಿ: ಗಾಂಧಿ ಹತ್ಯೆಯನ್ನು ಸಂಭ್ರಮಿಸುವ ಆರೆಸ್ಸೆಸ್ ನಪುಂಸಕ ಸಂಘಟನೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ್ದಕ್ಕೆ ಇಂಧನ ವಿ. ಸುನಿಲ್‌ಕುಮಾರ್ ತಿರುಗೇಟು ನೀಡಿದ್ದಾರೆ.
ಹೆಬ್ರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅನಗತ್ಯ ಟೀಕೆ ಟಿಪ್ಪಣಿಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಟ್ವೀಟ್‌ಅನ್ನು ನಾನು ಖಂಡಿಸುತ್ತೇನೆ. ಕಾಂಗ್ರೆಸ್ ನಾಯಕರು ಮಾನಸಿಕ ವೇದನೆಗೆ ಒಳಗಾಗಿದ್ದಾರೆ. ರಾಷ್ಟ್ರ ಧ್ವಜದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕಾಂಗ್ರೆಸ್‌ಗೆ ಉಳಿದಿಲ್ಲ. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಕಾಂಗ್ರೆಸ್ ಏನು ಮಾಡಿತ್ತು ? ಎಂದು ಪ್ರಶ್ನಿಸಿರುವ ಅವರು, ಆವತ್ತು ರಾಷ್ಟ್ರಧ್ವಜದ ವಿಚಾರದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ. ಅನ್ನೋದನ್ನು ದೇಶ ನೋಡಿದೆ. ಅಲ್ಲಿ ರಾಷ್ಟ್ರಧ್ವಜ ಹಾರಾಟ ಮಾಡಲು ಕಾಂಗ್ರೆಸ್ ಬಿಡಲಿಲ್ಲ.
ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜದ ಎದುರು ನಪುಂಸಕನಂತೆ ನಡೆದುಕೊಂಡಿದ್ದು ನಾವಲ್ಲ, ಕಾಂಗ್ರೆಸ್ .ಕಾಶ್ಮೀರದ ಶ್ರೀನಗರದಲ್ಲಿ ಮೋದಿ ಸರಕಾರ ಬರುವ ತನಕವೂ ಶ್ರೀನಗರದಲ್ಲಿ ರಾಷ್ಟ್ರಧ್ವಜ ಹಾರಿಸಲು ಬಿಡಲಿಲ್ಲ. ಅವತ್ತಿನ ಕಾಂಗ್ರೆಸ್ ಸರಕಾರ ನಪುಂಸಕತ್ವ ತೋರಿಸಿತ್ತು. ಭಯೋತ್ಪಾದಕರ ಮುಂದೆ ಮಂಡಿಯೂರಿ ನಿಂತು ನಪುಂಸಕ ರಂತೆ ನಡೆದುಕೊಂಡಿದ್ದು ಕಾಂಗ್ರೆಸ್ ಎಂದು ಟೀಕಾಪ್ರಹಾರ ಮಾಡಿದ್ದಾರೆ.
ಆರ್‌ಎಸ್‌ಎಸ್ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಮೂಲ ಜನತಾಪರಿವಾರ. ನಂತರ ಕಾಂಗ್ರೆಸ್ಸಿಗೆ ವಲಸೆ ಹೋಗಿದ್ದು ಯಾರು? ನಿಮ್ಮ ಮೂಲ ಯಾವುದು?ನಿಮ್ಮದು ವರುಣಾ ಕ್ಷೇತ್ರ ಮೂಲವೋ? ಬಾದಾಮಿ ಕ್ಷೇತ್ರ ಮೂಲವೋ?ಎಲ್ಲ ವಿಷಯಗಳು ಚರ್ಚೆಯಾಗಬೇಕು. ತಾನು ನೈತಿಕ ದಿವಾಳಿಯಾಗಿ ಬೇರೆಯವರ ಬಗ್ಗೆ ಮಾತನಾಡಬಾರದು. ಅಧಿಕಾರ ಬಂದಾಗ ಹೇಗೆ ಬೇಕಾದರೂ ವರ್ತಿಸುತ್ತೇನೆ ಅನ್ನೋದು ಸಿದ್ದರಾಮಯ್ಯ ಧೋರಣೆಯಾಗಿತ್ತು. ಬೊಮ್ಮಾಯಿ ಮತ್ತು ಮೋದಿಯವರ ಉತ್ತಮ ಆಡಳಿತ ಸಹಿಸಲಾಗದೆ ಜನರನ್ನ ದಿಕ್ಕುತಪ್ಪಿಸುತ್ತಿದ್ದಾರೆ. ಮಾನಸಿಕ ಒಳ ವೇದನೆಗೆ ಒಳಗಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
PublicNext
30/05/2022 01:05 pm