ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ರಾಜಕೀಯ ಪಕ್ಷಗಳಿಂದ ಕ್ರೈಸ್ತರ ಕಡೆಗಣನೆ; ಕ್ರೈಸ್ತ ಒಕ್ಕೂಟ ಅಸಮಾಧಾನ

ಮೂಡುಬಿದಿರೆ: ರಾಜಕೀಯ ಪಕ್ಷಗಳು ಕ್ರೈಸ್ತ ಸಮುದಾಯಕ್ಕೆ ಸೂಕ್ತ ಸ್ಥಾನ-ಮಾನ ನೀಡದೆ ಕಡೆಗಣಿಸುತ್ತಿದೆ ಎಂದು ಕ್ರೈಸ್ತ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ.

ಕ್ರೈಸ್ತ ಸಮುದಾಯದ ಮುಂದಾಳುಗಳು ಬುಧವಾರ ಮೂಡುಬಿದಿರೆ ತಾಲೂಕು ಪತ್ರಕರ್ತರ ಕಚೇರಿಯಲ್ಲಿ

ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಕರ್ನಾಟಕ ಕ್ರೈಸ್ತ ಒಕ್ಕೂಟದ ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ ವಿಲ್ಪ್ರೆಡ್ ಮೆಂಡೋನ್ಸಾ, ಕ್ಯಾಥೋಲಿಕ್ ಯೂನಿಯನ್ ಮಾಜಿ ರಾಜ್ಯ ಕಾರ್ಯದರ್ಶಿ ಆಲ್ವಿನ್ ಮಿನೇಜಸ್ ಮಾತನಾಡಿ, ಶಿಕ್ಷಣ- ಸಾಮಾಜಿಕ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಮುದಾಯವನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಿರುವುದನ್ನು ವಿರೋಧಿಸುವುದಾಗಿ ಹೇಳಿದರು.

ವಿಧಾನ ಪರಿಷತ್ ಚುನಾವಣೆಯಲ್ಲೂ ಸಮುದಾಯಕ್ಕೆ ಮಾನ್ಯತೆ ಸಿಕ್ಕಿಲ್ಲ. 1947ರಿಂದಲೂ ಬೆಂಬಲಿಸಿದ ಕಾಂಗ್ರೆಸ್ ಪಕ್ಷವೂ ಕಡೆಗಣಿಸಿರುವುದು ಬೇಸರ ಮೂಡಿಸಿದೆ ಎಂದರು.

ಈಗಾಗಲೇ ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿ ಸಮುದಾಯಕ್ಕೆ ಅವಕಾಶ ನೀಡಲು ಕೋರಿದರೂ ಚುನಾವಣೆ ಬಂದಾಗ ಸ್ಪರ್ಧಿಸಲು ಅವಕಾಶ ನೀಡುತ್ತಿಲ್ಲ. ಹಾಗಾದರೆ ಕ್ರೈಸ್ತರ ಮತ ಬೇಡವೇ ಎಂದು ಪ್ರಶ್ನಿಸಿದರು.

ಸಮುದಾಯದ ವಿವಿಧ ಸಂಘಟನೆಗಳ ಪ್ರಮುಖರಾದ ರಾಜೇಶ್ ಡಿಕೋಸ್ತ, ವಿನೋದ್ ಪಿಂಟೋ, ಜೈಸನ್ ಪಿರೇರಾ ಶಿರ್ತಾಡಿ, ರಿಚಾರ್ಡ್, ಜೀವನ್ ನಿಡ್ಡೋಡಿ, ಸೆಲ್ವಿನ್ ಕುಲಾಸೋ, ಕ್ಲಾರೆನ್ಸ್ ಲೋಬೊ ಆಲಂಗಾರು, ಪ್ರಕಾಶ್ ನಿಡ್ಡೋಡಿ, ವಲೇರಿಯನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

25/05/2022 07:19 pm

Cinque Terre

4.43 K

Cinque Terre

1

ಸಂಬಂಧಿತ ಸುದ್ದಿ