ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾರಾಯಣ ಗುರುಗಳ ಬಗ್ಗೆ ಕಾಂಗ್ರೆಸ್ ನಿಂದ ಬಿಜೆಪಿ ಪಾಠ ಕಲಿಯುವ ಅನಿವಾರ್ಯತೆಯಿಲ್ಲ!

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರವನ್ನು ಎಸ್ಎಸ್ಎಲ್ ಸಿ ಪಠ್ಯಪುಸ್ತಕದಿಂದ ಕೈಬಿಡುವ ವಿಚಾರವೇ ಇಲ್ಲ. ಅನೇಕ ಹೊಸ ಹೊಸ ವಿಚಾರಗಳನ್ನು ಪಠ್ಯಕ್ಕೆ ಸೇರಿಸುವ ಮೂಲಕ ಎನ್ಇಪಿಯಲ್ಲಿ ವಿದ್ಯಾರ್ಥಿಗಳಿಗೆ ಯಾವ ರೀತಿಯ ನೈಜ ಶಿಕ್ಷಣ ನೀಡಬೇಕೋ, ಆ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಆರ್ ಎಸ್ ಎಸ್ ತನ್ನ ಪ್ರಾತಃಸ್ಮರಣೆಯಲ್ಲಿ ನಾರಾಯಣ ಗುರುಗಳನ್ನು ಸ್ಮರಿಸುವ ಕೆಲಸವನ್ನು 1925ರಲ್ಲಿಯೇ ಮಾಡಿದೆ‌. ಆದ್ದರಿಂದ ನಾರಾಯಣ ಗುರುಗಳ ಬಗ್ಗೆ ಕಾಂಗ್ರೆಸ್ ನಿಂದ ಬಿಜೆಪಿ ಪಾಠ ಕಲಿಯುವ ಅನಿವಾರ್ಯತೆಯಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ವ್ಯಂಗ್ಯವಾಡಿದರು.

ನಗರದ ಕೊಡಿಯಾಲ್ ಬೈಲ್ ನಲ್ಲಿ ರುವ ಅಟಲ್ ಸೇವಾ ಕೇಂದ್ರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಬಳಕೆ ಮಾಡುವುದನ್ನು ಬಿಜೆಪಿ ಖಂಡಿಸುತ್ತಿದೆ. ಮಾಜಿ ಶಾಸಕ ಜೆ.ಆರ್.ಲೋಬೊ ನಾರಾಯಣ ಗುರುಗಳ ಪಠ್ಯಪುಸ್ತಕ ವಿವಾದದ ವಿಚಾರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರುಗಳ ಹೆಸರನ್ನಿಡುವಾಗ ಬಲವಾಗಿ ವಿರೋಧಿಸಿದ ಜೆ.ಆರ್.ಲೋಬೊರವರಿಗೆ ಈ ವಿಚಾರದಲ್ಲಿ ಮಾತನಾಡುವ ನೈತಿಕತೆಯಿಲ್ಲ. ಕೇರಳದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ನಾರಾಯಣ ಗುರುಗಳ ಶಿವಗಿರಿ ಮಠದಲ್ಲಿ ಯಾವ ರೀತಿ ನಡೆದುಕೊಂಡಿದೆ ಎಂಬುದು ಎಲ್ಲರಿಗೆ ತಿಳಿದಿದೆ ಎಂದರು.

ಹಲವಾರು ದಶಕಗಳಿಂದ ಕಾಂಗ್ರೆಸ್ ಸರಕಾರ ದೇಶದ ಮಕ್ಕಳಿಗೆ ನೈಜ ಇತಿಹಾಸವನ್ನು ಮರೆಮಾಚಿ, ದೇಶಕ್ಕೆ ದಾಳಿ ನಡೆಸಿರುವ ದಾಳಿಕೋರರ ಇತಿಹಾಸವನ್ನು ತಿಳಿಸಲಾಗಿದೆ. ಪರಿಣಾಮ ವಿದ್ಯಾರ್ಥಿಗಳು ಭಾರತವನ್ನು ಅಧ್ಯಯನ ಮಾಡುವಲ್ಲಿ ಸೋತಿದ್ದಾರೆ. ಇದೀಗ ಅದನ್ನೆಲ್ಲಾ ಬದಿಗಿಟ್ಟು ನಿಜವಾದ ಹೋರಾಟಗಾರರ ಇತಿಹಾಸವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಿಜೆಪಿ ಸರಕಾರ ಮಾಡುತ್ತಿದೆ. ನಾರಾಯಣ ಗುರುಗಳ ಪಠ್ಯ ಏಳನೇ ತರಗತಿಯಲ್ಲಿಯೂ ಇದ್ದು, ಜೊತೆಗೆ 10ನೇ ತರಗತಿಯ ಪಠ್ಯದಲ್ಲಿಯೂ ಅವರ ವಿಚಾರ ಇರಲಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು.

Edited By :
Kshetra Samachara

Kshetra Samachara

20/05/2022 11:24 pm

Cinque Terre

5.83 K

Cinque Terre

0

ಸಂಬಂಧಿತ ಸುದ್ದಿ