ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ: ಕಾರ್ಯಾಧ್ಯಕ್ಷ ಧ್ರುವನಾರಾಯಣ

ಉಡುಪಿ: ಪ್ರಮೋದ್ ಮಧ್ವರಾಜ್ ಓರ್ವ ಅವಕಾಶವಾದಿ ರಾಜಕಾರಣಿಯಾಗಿದ್ದಾರೆ. ಪಕ್ಷ ಅವರಿಗೆ ಎಲ್ಲವನ್ನೂ ನೀಡಿದ್ದರೂ ಅವರ ಸ್ವಾರ್ಥಕ್ಕಾಗಿ ಪಕ್ಷ ತೊರೆದು ಬಿಜೆಪಿಗೆ ಹೋಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ,ಮೊದಲ ಬಾರಿ ಶಾಸಕರಾದಾಗಲೇ ಅವರನ್ನು ಮಂತ್ರಿ ಮಾಡಲಾಗಿತ್ತು.ಇತ್ತೀಚೆಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು .ಹೀಗಿದ್ದರೂ ಅವರು ಪಕ್ಷದ ಮುಖಂಡರ ಜೊತೆ ಹೋಗುವ ಮುನ್ನ ಚರ್ಚೆ ನಡೆಸಿರಲಿಲ್ಲ. ಅವರು ಸೂಚಿಸಿದ ವ್ಯಕ್ತಿಯನ್ನು ಬ್ಲಾಕ್ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಪಕ್ಷ ಅವರಿಗೆ ಎಲ್ಲವನ್ಬೂ ಕೊಟ್ಟಿದ್ದರೂ ಅವರು ಪಕ್ಷ ತೊರೆದು ಹೋಗಿದ್ದು ಅವಕಾಶವಾದಿ ರಾಜಕಾರಣವಲ್ಕದೆ ಮತ್ತೇನೂ ಅಲ್ಲ.ಆದರೆ ವ್ಯಕ್ತಿಗಿಂತ ಪಕ್ಷ ಮಿಗಿಲಾಗಿದ್ದು ,ಉಡುಪಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುತ್ತೇವೆ ಎಂದು ಹೇಳಿದ್ದಾರೆ.

Edited By : Shivu K
Kshetra Samachara

Kshetra Samachara

11/05/2022 01:58 pm

Cinque Terre

11.71 K

Cinque Terre

1

ಸಂಬಂಧಿತ ಸುದ್ದಿ