ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಸೀದಿ ಎದುರು ಭಜನೆ ಮಾಡುವುದು ಸೂಕ್ತ ಅಲ್ಲ: ಶಾಸಕ ರಘುಪತಿ ಭಟ್

ಉಡುಪಿ: ಭಜನೆ ಎಂಬುದು ಒಳ್ಳೆಯ ಸಂಪ್ರದಾಯ.ನಾವು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ಆದರೆ ಮಸೀದಿಯ ಎದುರು ಭಜನೆ ಮಾಡುವುದು ಸಂಘರ್ಷಕ್ಕೆ ದಾರಿ ಮಾಡಿದಂತಾಗುತ್ತದೆ. ಇದು ಸೌಹಾರ್ದಕ್ಕೆ ಧಕ್ಕೆ ತರುತ್ತದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಶ್ರೀ ರಾಮ ಸೇನೆಯವರ ಆಝಾನ್ ಗೆ ಪ್ರತಿಯಾಗಿ ಮಸೀದಿಯ ಎದುರು ಬಜನೆ ಮಾಡುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ರಘುಪತಿ ಭಟ್ , ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನ ಆದೇಶ ಇದೆ. ಅದನ್ನು ಸರಕಾರ ಕಟ್ಟುನಿಟ್ಟಾಗಿ ಪಾಲಿಸಲಿದೆ.ಆದರೆ ಏಕಾಏಕಿ ಅದನ್ನು ನಿಲ್ಲಿಸಲು ಆಗುವುದಿಲ್ಲ. ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯದು.ಅದಕ್ಕಾಗಿ ಆ ಸಮುದಾಯದವರ ಮನವೊಲಿಸಬೇಕಾಗುತ್ತದೆ.ಆದರೆ ಅದಕ್ಕೆ ಪ್ರತಿಯಾಗಿ ಮಸೀದಿಯೆದುರು ಭಜನೆ ಸೂಕ್ತ ಅಲ್ಲ ಎಂದು ಎಂದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

02/05/2022 06:28 pm

Cinque Terre

5.08 K

Cinque Terre

16

ಸಂಬಂಧಿತ ಸುದ್ದಿ