ಪಚ್ಚನಾಡಿ : ಸುಮಾರು 16 ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರದ 19 ನೇ ಪಚ್ಚನಾಡಿ ವಾರ್ಡಿನ ಪದವಿನಂಗಡಿ ಪ್ರದೇಶದ ಗಂಧಕಾಡು - ಭಟ್ರಕುಮೇರಿ ಕೂಡು ರಸ್ತೆ ಬಳಿ ರಸ್ತೆ ಕಾಂಕ್ರೀಟಿಕರಣ ಮತ್ತು ಮುಗ್ರೋಡಿ ಪರಿಸರದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಬಳಿ ರಸ್ತೆ ಅಗಲೀಕರಣ, ತಡೆಗೋಡೆ ರಚನೆ, ಚರಂಡಿ ನಿರ್ಮಾಣ ಹಾಗೂ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಸ್ಥಳೀಯ ಮ.ನ.ಪಾ ಸದಸ್ಯೆ ಸಂಗೀತಾ ಆರ್. ನಾಯಕ್, ಮಂಡಲದ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಚ್ಚನಾಡಿ, ಓಬಿಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ರಾಮ ಮುಗ್ರೋಡಿ, ಎಸ್ ಸಿ ಮೋರ್ಚಾದ ಕಾರ್ಯದರ್ಶಿ ಮುಕೇಶ್ ಗಂಧಕಾಡು, ಶಕ್ತಿಕೇಂದ್ರ ಸಹಪ್ರಮುಖ್ ವಸಂತ್ ಮುಗ್ರೋಡಿ, ಬೂತ್ ಅಧ್ಯಕ್ಷರಾದ ಮನೋಜ್ ಮುಗ್ರೋಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/03/2022 05:32 pm