ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತಾಂತರ ನಿಷೇಧ ಕಾಯ್ದೆಯಿಂದ ಮಿಷನರಿಗಳಿಗೆ ಆಘಾತ; ಶೇಣವ

ಮಂಗಳೂರು: ಅಲೇಲುಯಾ ಎಂದು ಬೊಬ್ಬೆ ಹೊಡೆದು ಕಣ್ಣಿಲ್ಲದವನಿಗೆ ಕಣ್ಣು, ಕಾಲಿಲ್ಲದವನಿಗೆ ಕಾಲು ಭರಿಸುತ್ತೇವೆಂದು ನಂಬಿಸಿ, ವಂಚನೆ ಮಾಡಿ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಮಿಷನರಿಗಳಿಗೆ ರಾಜ್ಯದಲ್ಲಿ ಜಾರಿಗೊಂಡ ಮತಾಂತರ ನಿಷೇಧ ಕಾಯ್ದೆಯಿಂದ ಭಾರಿ ಆಘಾತವಾಗಿದೆ ಎಂದು ಬಿಜೆಪಿ ದ.ಕ‌. ಜಿಲ್ಲಾ ವಕ್ತಾರ ಜಗದೀಶ ಶೇಣವ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಈ ಕಾರ್ಯವನ್ನು ಹಾಗೂ ಮಸೂದೆಯನ್ನು ಜಾರಿಗೊಳಿಸಿದ ಸಿಎಂ ಬಸವರಾಜ್ ಬೊಮ್ಮಾಯಿಯವರನ್ನು ಬಿಜೆಪಿ ಕಾರ್ಯಕರ್ತರ ಪರವಾಗಿ ಅಭಿನಂದಿಸುತ್ತೇನೆ. ರೋಗ ಶಮನ, ಬಡತನ ನಿರ್ಮೂಲನೆ ಇತ್ಯಾದಿ ಆಸೆ, ಆಮಿಷಗಳನ್ನೊಡ್ಡಿ, ಬಲವಂತವಾಗಿ ಮತಾಂತರ ಮಾಡಲಾಗುತ್ತಿತ್ತು. ಇದೀಗ ಈ ಪ್ರಕ್ರಿಯೆಗೆ ದೊಡ್ಡದೊಂದು ಬೇಕ್ ದೊರಕಿದಂತಾಗಿದೆ ಎಂದರು.

ಬಿಜೆಪಿ ರೈತರ ಪರವಾಗಿದೆ ಎಂದು ರಾಜ್ಯ ಸರಕಾರ ಮತ್ತೊಮ್ಮೆ ಸಾಬೀತು ಪಡಿಸಿದೆ. ನಿನ್ನೆ ರೈತರ ಮಕ್ಕಳಿಗೆ ಶಿಷ್ಯ ವೇತನವನ್ನು ಸಿಎಂ ಘೋಷಣೆ ಮಾಡಿದ್ದಾರೆ. ಅಲ್ಲದೆ 1,200 ಕೋಟಿ ರೂ. ಸರಕಾರದ ಬೊಕ್ಕಸಕ್ಕೆ ಹೊರೆ ಮಾಡಿಕೊಂಡು ಒಣಬೇಸಾಯಕ್ಕೆ, ನೀರಾವರಿಗೆ, ತೋಟಗಾರಿಕೆ ಬೆಳೆ ನಷ್ಟಕ್ಕೆ ಪರಿಹಾರ ನೀಡುತ್ತಿದೆ ಎಂದರು.

Edited By : Manjunath H D
Kshetra Samachara

Kshetra Samachara

22/12/2021 06:36 pm

Cinque Terre

7.33 K

Cinque Terre

0

ಸಂಬಂಧಿತ ಸುದ್ದಿ