ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ- ಮಂಗಳೂರು ರೈಲು ಸಂಚಾರ ಪುನಾರಂಭಿಸುವಂತೆ ಎನ್ಎಸ್ ಯುಐ ಪ್ರತಿಭಟನೆ

ಮಂಗಳೂರು: ಸುಬ್ರಹ್ಮಣ್ಯ - ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತದಿಂದ ಪುತ್ತೂರು, ಮಂಗಳೂರಿಗೆ ಬರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆಂದು ಎನ್ಎಸ್ ಯುಐ ದ.ಕ. ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಇಂದು ಪ್ರತಿಭಟನೆ ನಡೆಯಿತು‌.

ಕೋವಿಡ್ ಬಳಿಕ ಸುಬ್ರಹ್ಮಣ್ಯ- ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ರೈಲು ಸಂಚಾರವನ್ನು ತಕ್ಷಣ ಪುನಾರಂಭಿಸುವಂತೆ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಎನ್ಎಸ್ ಯುಐ ರಾಜ್ಯಾಧ್ಯಕ್ಷ ಫಾರೂಕ್ ಬಯಾಬೆ ಮಾತನಾಡಿ, ಕೋವಿಡ್ ಮುಗಿದ ಬಳಿಕವೂ ಸುಬ್ರಹ್ಮಣ್ಯ - ಮಂಗಳೂರು ಪ್ಯಾಸೆಂಜರ್ ರೈಲು ಸಂಚಾರ ಇನ್ನೂ ಆರಂಭಿಸಲಾಗಿಲ್ಲ. ಇದರಿಂದ ಪುತ್ತೂರು, ಬಂಟ್ವಾಳ ಹಾಗೂ ಸುಬ್ರಹ್ಮಣ್ಯ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ರೈಲ್ವೆ ಅಧಿಕಾರಿಗಳು ಈ ರೈಲನ್ನು ಆರಂಭಿಸದೆ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗುತ್ತಿದ್ದಾರೆ. ಈ ಬಗ್ಗೆ ಎನ್ಎಸ್ ಯುಐ ಮೂರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಯಾವುದೇ ಲಾಬಿಗೆ ಮಣಿಯದೆ ಈ ರೈಲು ಸಂಚಾರ ಪುನಾರಂಭಿಸಬೇಕೆಂದು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

02/12/2021 06:03 pm

Cinque Terre

7.74 K

Cinque Terre

0

ಸಂಬಂಧಿತ ಸುದ್ದಿ