ಮಂಗಳೂರು: "ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀ ಕಾರಿಂಜೇಶ್ವರದ ಪಾವಿತ್ರ್ಯತೆಯನ್ನು ಹಾಳು ಮಾಡುವ ಪ್ರಯತ್ನ ಆಗ್ತಿದೆ. ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸ ಆಗ್ತಿದೆ" ಎಂದು ಹಿಂದೂ ಜಾಗರಣ ವೇದಿಕೆ ಕಿಡಿಕಾರಿದೆ.
ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂಜಾವೇ ಮುಖಂಡರು, "ಒಂದು ಕಡೆ ವ್ಯವಹಾರಕ್ಕೋಸ್ಕರ, ಇನ್ನೊಂದು ಕಡೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದು ಪಾವಿತ್ರ್ಯತೆಯನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಶ್ರೀ ಕಾರಿಂಜೇಶ್ವರದ ಸಂರಕ್ಷಣೆಯೇ ನಮ್ಮ ಉದ್ದೇಶ. ಹೀಗಾಗಿ ನಾವು ರುದ್ರಗಿರಿಯ ರಣ ಕಹಳೆ ಎಂಬ ಹೆಸರಿನಡಿಯಲ್ಲಿ ಬೃಹತ್ ಜನಜಾಗೃತಿ ಸಭೆಯನ್ನು ನ. 21 ರಂದು ಆಯೋಜಿಸಿದ್ದೀವಿ" ಎಂದರು.
ಅಂದು ಮಧ್ಯಾಹ್ನ 2.30ಕ್ಕೆ ವಗ್ಗ ಜಂಕ್ಷನ್ ನಿಂದ ಕಾಲ್ನಡಿಗೆಯಲ್ಲಿ ಭವ್ಯ ಶೋಭಾಯಾತ್ರೆ ಕಾರಿಂಜ ರಥಬೀದಿಗೆ ಹೊರಡಲಿದೆ ಎಂದರು. ಇನ್ನು ಕಾರಿಂಜದ ಸುತ್ತಮುತ್ತ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗ್ತಿದೆ. ಗೋಮಾಳ ಭೂಮಿಯನ್ನು ಅತಿಕ್ರಮಿಸಲಾಗ್ತಿದೆ. ಅಲ್ಲದೆ, ಶ್ರೀ ಕ್ಷೇತ್ರಕ್ಕೆ ಬಂದು ಅನ್ಯಮತೀಯರು ಪಾವಿತ್ರ್ಯತೆ ಹಾಳು ಮಾಡ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
10/11/2021 03:41 pm