ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಕಾಂಗ್ರೆಸ್ ದೇಶದಲ್ಲೇ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ"

ಉಡುಪಿ: ಹಾನಗಲ್ ಮತ್ತು ಸಿಂದಗಿ ಚುನಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ,

ಕಾಂಗ್ರೆಸ್ ದೇಶದಲ್ಲೇ ಅಸ್ತಿತ್ವ ಕಳೆದುಕೊಳ್ಳುವ ಸ್ಥಿತಿ ತಲುಪಿದೆ. ಆಡಳಿತಾತ್ಮಕ ವಿಚಾರದಲ್ಲಿ ಲೋಪದೋಷ ಇದ್ದರೆ ಆರೋಪ ಮಾಡಿ. ಅನಗತ್ಯ ಗೊಂದಲ ಸೃಷ್ಟಿಸಬೇಡಿ. ಎರಡೂ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದರು.

ಪೊಲೀಸರು ಕೇಸರಿ ಧರಿಸಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವಿಚಾರವಾಗಿ ಮಾತನಾಡಿದ ಕೋಟ,

ಸಿದ್ದರಾಮಯ್ಯ ಹಿಂದುತ್ವ ವಿರೋಧಿ ಹೇಳಿಕೆ ನೀಡುವುದು ಹೊಸತಲ್ಲ. ಎಲ್ಲರೂ ಸಮಾನರು ಎನ್ನುವುದು ಬಿಟ್ಟು ಕೆಲವರು ಮಾತ್ರ ಸಮಾನರು ಅಂತಾರೆ. ಸಿದ್ದರಾಮಯ್ಯ ಮತ್ತು ಅವರ ಪಕ್ಷ ಯಾವ ಸ್ಥಾನದಲ್ಲಿದೆ ಅರ್ಥ ಮಾಡಿಕೊಳ್ಳಲಿ.

ಖಾಸಗಿಯಾಗಿ ಯಾವ ಉಡುಪು ಧರಿಸಬೇಕು ಎನ್ನುವ ಹಕ್ಕು ಪೊಲೀಸರಿಗೆ ಇದೆ. ಗೊಂದಲ ಮಾಡುವುದು ಉನ್ನತ ಸ್ಥಾನದಲ್ಲಿರುವ ಸಿದ್ದರಾಮಯ್ಯಗೆ ಶೋಭೆ ತರುವುದಿಲ್ಲ ಎಂದು ಕೋಟ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

19/10/2021 07:30 pm

Cinque Terre

13.29 K

Cinque Terre

10

ಸಂಬಂಧಿತ ಸುದ್ದಿ