ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿಲ್ಪಾಡಿ: ಕಾಟಾಚಾರಕ್ಕೆ ನಡೆದ ಗ್ರಾಮ ವಾಸ್ತವ್ಯ

ಮುಲ್ಕಿ: ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆ ವತಿಯಿಂದ ಕಿಲ್ಪಾಡಿ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಗ್ರಾಮ ವಾಸ್ತವ್ಯ ಹಾಗೂ ಅರ್ಜಿ ವಿಲೇವಾರಿ ಕಾಟಾಚಾರಕ್ಕೆ ನಡೆದಿದ್ದು ಗ್ರಾಮಸ್ಥರು ಇಲ್ಲದೆ ಬಿಕೋ ಎನ್ನುತ್ತಿತ್ತು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಶನಿವಾರ ನಡೆದಿದ್ದು ಶುಕ್ರವಾರ ಸಂಜೆ ವೇಳೆಗೆ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿತ್ತು. ಇದರಿಂದಾಗಿ ಹೆಚ್ಚಿನ ಗ್ರಾಮಸ್ಥರಿಗೆ ಮಾಹಿತಿ ಕೊರತೆಯಿಂದಾಗಿ ಕೇವಲ ಕಾಟಾಚಾರಕ್ಕೆ ಸಭೆ ಹಾಗೂ ಲೆಕ್ಕ ಭರ್ತಿಗೆ ಅರ್ಜಿ ವಿಲೇವಾರಿ ನಡೆಯಿತು. ಈ ನಡುವೆ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ತಹಶಿಲ್ದಾರ್ ಸಹಿತ ಕಂದಾಯ ಇಲಾಖೆ ಅಧಿಕಾರಿಗಳು ರಾತ್ರಿ ಹೊತ್ತು ಉಪಸ್ಥಿತರಿದ್ದು ಗ್ರಾಮಸ್ಥರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬ ನಿಯಮಗಳು ಇದ್ದರೂ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪಗಳು ಕೇಳಿಬಂದಿದೆ.

ಮೂರು ಸಾವಿರಕ್ಕೂ ಮಿಕ್ಕಿ ಜನಸಂಖ್ಯೆ ಇರುವ ಕಿಲ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೇವಲ 24 ಅರ್ಜಿಗಳು ವಿಲೇವಾರಿ ಆಗಿದೆ ಎಂದು ಮುಲ್ಕಿ ತಹಸಿಲ್ದಾರ್ ಆಡಳಿತದ ಮೂಲಗಳು ತಿಳಿಸಿದೆ.

ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಸಿದ ಮುಲ್ಕಿ ತಹಶಿಲ್ದಾರ ಕಚೇರಿ ಆಡಳಿತದ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು ಜಿಲ್ಲಾಧಿಕಾರಿಗಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

18/10/2021 09:43 am

Cinque Terre

7.08 K

Cinque Terre

1

ಸಂಬಂಧಿತ ಸುದ್ದಿ