ಉಡುಪಿ: ಪೂರ್ಣಪ್ರಜ್ಞ ವಿದ್ಯಾಪೀಠದ ಸಭಾಂಗಣದಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 34 ನೇ ಚಾತುರ್ಮಾಸ್ಯ ವ್ರತ ಸಮಾಪ್ತಿಯ ಅಂಗವಾಗಿ ಧರ್ಮಸಭೆ ನಡೆಯಿತು.ಧರ್ಮಸಭೆಯಲ್ಲಿ ಅಭ್ಯಾಗತರಾಗಿ ಪಾಲ್ಗೊಂಡ ಸಿಎಂ ಬಸವರಾಜ ಬೊಮ್ಮಾಯಿ ಶುಭ ಸಂದೇಶ ನೀಡಿದರು.
ಪೇಜಾವರ ಶ್ರೀಗಳು ತಮಗೆ ಅರ್ಪಿಸಿದ ಅಭಿವಂದನೆಗೆ ಹರ್ಷ ವ್ಯಕ್ತಪಡಿಸಿ ಗೋವಿನ ಸಂತತಿಯ ಉಳಿವಿಗೆ ಇಡೀ ದೇಶ ಕಂಕಣಬದ್ಧರಾಗಲೇಬೇಕು ಎಂದರು.ಇದಕ್ಕೂ ಮೊದಲು ವಿದ್ವಾನ್ ಬೆಮ್ಮತ್ತಿ ಶ್ರೀಶಾಚಾರ್ಯರು ಸಂಪಾದಿಸಿದ
ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಮಹಾಭಾರತ ಅಂಕಣಬರಹಗಳ ಸಂಗ್ರಹ ಕೃತಿ ಮಹಾಭಾರತ ಸಾರೋದ್ಧಾರ ಕೃತಿಯನ್ನು ಎಚ್. ಕೆ ಪಾಟೀಲ್ ಬಿಡುಗಡೆಗೊಳಿಸಿ ಮಾತನಾಡಿದರು.ಪ್ರೊ ಎ. ಹರಿದಾಸ್ ಭಟ್ ಉಪನ್ಯಾಸ ನೀಡಿದರು.
Kshetra Samachara
23/09/2021 12:09 pm