ಮಂಗಳೂರು: ಕಾಂಗ್ರೆಸ್ ಕಚೇರಿಯಲ್ಲಿ ಹುಕ್ಕಾ ಬಾರ್ ತೆರಯಲಿ ಎಂದ ಸಿಟಿ ರವಿ ಒಬ್ಬ ದೇಶದ್ರೋಹಿ. ಈ ಮೂಲಕ ಸಿಟಿ ರವಿ ಸ್ವಾತಂತ್ರ್ಯ ಹೋರಾಟಗಾರನ್ನ ಅವಮಾನಿಸಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಕಿಡಿಕಾರಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಕೊಂದ ಗೋಡ್ಸೆಯನ್ನ ಇವರು ದೇಶಪ್ರೇಮಿ ಅಂತಾರೆ.ಸಾಮಾಜಿಕ ಹಿನ್ನೆಲೆ ಇಲ್ಲದ, ಲೂಸ್ ಟಾಕ್ ಮಾಡುವ ಮಂದಿಗೆ ಬಿಜೆಪಿ ಮಣೆ ಹಾಕುತ್ತಿದೆ ಎಂದು ಸಿಟಿ ರವಿಯವ್ರ ಬಾಲಿಶವಾದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದ ಅವರು,ಮಂಗಳೂರಲ್ಲಿ ಅಂಬೇಡ್ಕರ್ ಭವನವನ್ನು ಯಾವಾಗಲೋ ಉದ್ಘಾಟನೆ ಮಾಡಬೇಕಿತ್ತು. ಅದಕ್ಕೆ ಸಿಎಂ ಉದ್ಘಾಟನೆ ಮಾಡೋ ವೇಳೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು ಎಂದರು. ಇನ್ನು ಕಬಕದಲ್ಲಿ ನಡೆದ ಘಟನೆಗೆ ಜಿಲ್ಲಾಡಳಿತ ಹಾಗೂ ಮತೀಯವಾದಿ ಸಂಘಟನೆಗಳು ಕಾರಣ ಎಂದರು.
Kshetra Samachara
16/08/2021 04:28 pm