ಉಡುಪಿ:ಇವತ್ತು ದೇಶಾದ್ಯಂತ 75 ನೇ ಸ್ವಾತಂತ್ರೋತ್ಸವ ಸಂಭ್ರಮ.
ಪ್ರಧಾನಿ ಮೋದಿಯವರ ಫಿಟ್ ಇಂಡಿಯಾ ಘೋಷಣೆಯಡಿ ಅಲ್ಲಲ್ಲಿ ಕಾರ್ಯಕ್ರಮ ನಡೆಯುತ್ತಿದೆ.
ಉಡುಪಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಇಂಧನ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಭಾಗಿಯಾಗಿ ಸೈಕಲ್ ಜಾಥಾಗೆ ಚಾಲನೆ ನೀಡಿ ಸ್ವತಃ ಸೈಕಲ್ ಚಲಾಯಿಸಿದರು.
ಮಣಿಪಾಲ- ಮಲ್ಪೆವರೆಗೆ ಸ್ವಾತಂತ್ರ್ಯೋತ್ಸವದ ಸೈಕಲ್ ಜಾಥಾ ನಡೆಯಿತು.
ಸುಮಾರು ಐದು ಕಿಲೋಮೀಟರ್ ಸೈಕಲ್ ಓಡಿಸಿದ ಸಚಿವ ಸುನಿಲ್ ಕುಮಾರ್ ಜೊತೆ ಜಾಥಾದಲ್ಲಿ ಸುಮಾರು 200 ಜನ ಪಾಲ್ಗೊಂಡರು.
Kshetra Samachara
15/08/2021 08:48 am