ಮಂಗಳೂರು: ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ವಿದ್ಯಾರ್ಥಿನಿ ಬಂಧನವನ್ನು ನಾವು ಖಂಡಿಸುತ್ತೇವೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿಯರ ಟ್ವೀಟ್ ಫಾರ್ವರ್ಡ್ ಮಾಡಿದ್ದಕ್ಕೆ ಯಾಕೆ ಬಂಧಿಸಬೇಕು? ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ತಾಣಗಳಲ್ಲಿ "ಟೂಲ್ ಕಿಟ್" ಕಾಮನ್ ಎಂದ ಅವರು, ಎಲ್ಲ ಪಕ್ಷದ ಐಟಿ ಸೆಲ್ ಟೂಲ್ ಕಿಟ್ ಮಾಡಲ್ವ? ಒಬ್ಬ ವಿದ್ಯಾರ್ಥಿನಿಯನ್ನು ಅರೆಸ್ಟ್ ಮಾಡಿದ್ರೂ ಸಿಎಂ, ಗೃಹ ಸಚಿವರು ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ಇವತ್ತು ಕೇಂದ್ರದ ದಬ್ಬಾಳಿಕೆಗೆ ರಾಜ್ಯ ಸರಕಾರ ಶರಣಾಗಿರೋದು ನಾಚಿಕೆಯ ವಿಚಾರ. ಕನ್ನಡಿಗರಿಗೆ ರಕ್ಷಣೆ ಕೊಡದೇ ಇದ್ರೆ ಇದು ಯಾವ ರೀತಿ ಆಡಳಿತ? ಟೂಲ್ ಕಿಟ್ ಓಪನ್ ಡಾಕ್ಯುಮೆಂಟ್, ಅದೇನು ಆಟಂ ಬಾಂಬ್ ಅಲ್ಲ. ಇದು ರೈತರ ಧ್ವನಿ ದಮನಿಸಲು ಮತ್ತು ಹೋರಾಟ ಹತ್ತಿಕ್ಕುವ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
16/02/2021 06:57 pm