ಮಂಗಳೂರು: ವಿಧಾನ ಪರಿಷತ್ ಅನ್ನು ಕಾಂಗ್ರೆಸ್ ತನ್ನ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಿ ಬಳಸುತ್ತಿರುವುದು ಅತ್ಯಂತ ಖೇದಕರ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಹೇಳಿದರು.
ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಸಭಾಪತಿ ಆಯ್ಕೆಯ ಸಂದರ್ಭ, ಗೋ ಹತ್ಯೆ ವಿರುದ್ಧದ ಮಸೂದೆ ಅಂಗೀಕಾರದ ಸಂದರ್ಭಗಳಲ್ಲಿ ಕಾಂಗ್ರೆಸ್, ಆಡಳಿತ ಪಕ್ಷಕ್ಕೆ ಅಥವಾ ವಿಧಾನ ಪರಿಷತ್ ಹೊಸ ಸದಸ್ಯರಿಗೂ ಅವಕಾಶಗಳನ್ನು ನೀಡದಂತೆ ಗದ್ದಲ ಎಬ್ಬಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ವಿಧಾನ ಪರಿಷತ್ ಅನ್ನು ತನ್ನ ರಾಜಕೀಯ ದುರುದ್ದೇಶಕ್ಕೆ ಬಳಸುತ್ತಿದ್ದು, ಇದು ಖಂಡನೀಯ ಎಂದರು.
ಕಾಂಗ್ರೆಸ್ ಗೂ, ಜನತಾ ದಳಕ್ಕೂ, ಸಿದ್ದರಾಮಯ್ಯರಿಗೂ, ಕುಮಾರಸ್ವಾಮಿಗೂ ಇರುವ ಅಭಿಪ್ರಾಯ ಭೇದವನ್ನು ತೋರ್ಪಡಿಸಲು ವಿಧಾನ ಪರಿಷತ್ ನ ಕಾರ್ಯಚಟುವಟಿಕೆಗಳನ್ನು ಬಳಸಿಕೊಳ್ಳುವುದು ತಪ್ಪು ಎಂದು ಪ್ರತಾಪ್ ಸಿಂಹ ನಾಯಕ್ ಹೇಳಿದರು.
Kshetra Samachara
12/02/2021 06:17 pm