ಮಂಗಳೂರು: ಪೊಲೀಸ್ ಸಿಬ್ಬಂದಿಯ ಕೊಲೆ ಯತ್ನ ಪ್ರಕರಣದಲ್ಲಿ ಮಾಯಾ ಗ್ಯಾಂಗ್ ಮತ್ತು ಕಾರ್ಖಾನ ಗ್ಯಾಂಗ್ ನ ಆರೋಪಿಗಳನ್ನು ಪತ್ತೆ ಹಚ್ಚಿದ ಮಂಗಳೂರು ಪೊಲೀಸ್ ಇಲಾಖೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಅಭಿನಂದನೆ ಸಲ್ಲಿಸಿದ್ದಾರೆ.
ಪೊಲೀಸರನ್ನು ಕೊಲ್ಲುವ ಸಂಚನ್ನು ಎಸ್ ಡಿಪಿಐ ಮುಖಂಡರು, ಕಾರ್ಯಕರ್ತರು
ರೂಪಿಸಿದ್ದರು ಎಂದು ಆರೋಪಿಸಿದ ನಳಿನ್,ಈ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಸ್ ಡಿಪಿಐ ಮತ್ತು ಪಿಎಫ್ ಐ ನ ಇಂತಹ ಕುಕೃತ್ಯಗಳು ಹೊಸತಲ್ಲ. ಈ ಪ್ರಕರಣದಲ್ಲಿ ಇನ್ನು ಹೆಚ್ಚಿನ ತನಿಖೆಯಾಗಬೇಕು. ನೇರ ಕೈವಾಡ ಇರುವವರ ಬಂಧನವಾಗಬೇಕು ಎಂದರು.
Kshetra Samachara
31/01/2021 11:51 am