ವಂಡ್ಸೆ:ಕಾಮನ್‌ವೆಲ್ತ್ ನಲ್ಲಿ ಕಂಚು ಗೆದ್ದ ಗುರುರಾಜ್ ಪೂಜಾರಿ ಇಂದು ತವರೂರು ಕುಂದಾಪುರ ಸಮೀಪದ ಜಡ್ಡುಗೆ ಸಂಜೆ ಆಗಮಿಸಿದರು. ಇಲ್ಲಿ ಇವರಿಗೆ ಭವ್ಯ ಸ್ವಾಗತವೂ ಸಿಕ್ಕಿದೆ.
ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಗುರುರಾಜ್ ಪೂಜಾರಿ ಅವರನ್ನ ಆತ್ಮೀಯವಾಗಿ ಸ್ವಾಗತಿಸಿ ಮಾತನಾಡಿದರು. "ಹೆತ್ತವರಿಗೆ, ಕುಟುಂಬದವರಿಗೆ ಕೀರ್ತಿ ತಂದ ಇವರ ಸಾಧನೆಯ ಹಿಂದೆ ಅಪಾರ ಪರಿಶ್ರಮವಿದೆ. ಗುರುರಾಜ್, ಮೂಕಾಂಬಿಕೆಯ ಪದವಿಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿ ಎಂಬುದನ್ನು ಕೇಳಿದಾಗ ಅತೀವ ಸಂತೋಷವಾಯಿತು. ಭಗವತಿ ಮೂಕಾಂಬಿಕೆಯ ಅನುಗ್ರಹದೊಂದಿಗೆ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹೇಳಿದರು.
ಬೈಂದೂರು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ,ರಾಘವೇಂದ್ರ ನೆಂಪು, ಹಲವಾರು ಗಣ್ಯರು,ಸ್ನೇಹಿತರು ಸಡಗರ ಸಂಭ್ರಮದಲ್ಲಿ ಬರಮಾಡಿಕೊಂಡರು.
Kshetra Samachara
07/08/2022 07:56 pm