ಮಂಗಳೂರು : ಎಸ್ ಡಿಪಿಐಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯದಲ್ಲಿ ರಾಜಕಾರಣ ಮಾಡುತ್ತಿದೆ. ಈ ದೇಶದಲ್ಲಿ ಜಾತಿ ಹೆಸರಿನಲ್ಲಿ ವಿಭಜನೆ ಮಾಡಿರೋದು ಕಾಂಗ್ರೆಸ್ ಅಲ್ಲ. ಬಿಜೆಪಿ ಹಾಗೂ ಎಸ್ ಡಿಪಿಐನವರು ಒಡೆಯುವ ಕೆಲಸ ಮಾಡಿದ್ದಾರೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದರು.
ಎಸ್ ಡಿಪಿಐ ದೇಶಕ್ಕೆ ಮಾರಕವಾಗಿದೆ. ಹಿಂದೆ ಎಸ್ ಡಿಪಿಐಯನ್ನು ಬ್ಯಾನ್ ಮಾಡಬೇಕೆಂದು ಹೇಳುತ್ತಿದ್ದ ಬಿಜೆಪಿಗೆ ಈಗ ತಮ್ಮ ಕೈಯಲ್ಲಿ ಅಧಿಕಾರವಿದ್ದರೂ ಅದನ್ನು ಬ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ.
ಎಸ್ ಡಿಪಿಐ ಜಾತಿಯ ಆಧಾರದಲ್ಲಿ ದಲಿತರನ್ನು ಹಿಂದೂಗಳಿಂದ ಪ್ರತ್ಯೇಕ ಮಾಡುವುದನ್ನು ನಿಲ್ಲಿಸಲಿ. ಬಿಜೆಪಿ ಕೂಡಾ ಜಾತಿಯ ಆಧಾರದಲ್ಲಿ ಒಡೆಯುವ ಕೆಲಸ ಮಾಡುತ್ತಿದೆ. ಹಿಂದುತ್ವದ ಆಧಾರದಲ್ಲಿ ಅಧಿಕಾರ ಪಡೆದ ಬಿಜೆಪಿ ಏಕೆ ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುತ್ತದೆ ಎಂದು ಧರ್ಮೇಂದ್ರ ಪ್ರಶ್ನಿಸಿದರು.
ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದೆಯೂ ಹಿಂದೂ ಮಹಾಸಭಾದ ಕೂಸು, ಈಗಲೂ ಅದರ ಕೂಸು. ಆದರೆ ಬಿಜೆಪಿ ಅದನ್ನು ಹೈಜಾಕ್ ಮಾಡಿದೆ.ಇವತ್ತಲ್ಲ ನಾಳೆ ಅದು ಬಿಜೆಪಿಯನ್ನು ತೊರೆದು ಹಿಂದೂ ಮಹಾಸಭಾಕ್ಕೆ ಬರೆಲೇಬೇಕು. ಹಿಂದೂ ಮಹಾಸಭಾ ಅಂದಿನಿಂದ ಇಂದಿನವರೆಗೂ ಹಿಂದುತ್ವವನ್ನು ಪಾಲಿಸುತ್ತಾ ಬಂದಿದೆ. ನಾವು ಎಲ್ಲೂ ಹೊಂದಾಣಿಕೆ ಮಾಡಿಕೊಂಡು ಬಂದಿಲ್ಲ ಎಂದರು.
PublicNext
04/04/2022 11:02 pm