ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು : ಪ್ರಧಾನಿ ಒಳಿತಿಗಾಗಿ ಇನ್ನಷ್ಟು ದೇಶ ಸೇವೆ ಮಾಡುವ ಶಕ್ತಿ ಭಗವಂತ ಕರುಣಿಸಲೆಂದು ಸಾಸ್ ವತಿಯಿಂದ ಸಾಮೂಹಿಕ ಪ್ರಾರ್ಥನೆ

ಕಾಪು : ಪ್ರಧಾನಿ ನರೇಂದ್ರ ಮೋದಿಯವರಿಗೆ ಭಗವಂತನು ದೀರ್ಘಾಯುಷ್ಯ, ಆರೋಗ್ಯ ಮತ್ತು ಇನ್ನಷ್ಟು ಸೇವೆ ಮಾಡುವ ಶಕ್ತಿ ಕರುಣಿಸಲೆಂದು ಪ್ರಾರ್ಥಿಸಿ ಸಾಸ್ ಸಂಘಟನೆಯ ನೇತೃತ್ವದಲ್ಲಿ ಕಾಪುವಿನಲ್ಲಿ‌ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜ ಕಾಪು ವಲಯದ ಪದಾಧಿಕಾರಿಗಳು ಮತ್ತು ಸದಸ್ಯರು ಜೊತೆಗೂಡಿ ಕೊಪ್ಪಲಂಗಡಿ ಶ್ರೀ ವಾಸುದೇವ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಕೊಪ್ಪಲಂಗಡಿ ವಾಸುದೇವ ಸ್ವಾಮಿ ದೇವಸ್ಥಾನದ ಅರ್ಚಕ ನಾಗರಾಜ್ ಭಟ್ ಪೂಜೆ ನೆರವೇರಿಸಿದರು.

ಅಯ್ಯಪ್ಪ ಸೇವಾ ಸಮಾಜ ಕಾಪು ವಲಯದ ಕಾರ್ಯಾಧ್ಯಕ್ಷ ರಘುರಾಮ್ ಶೆಟ್ಟಿ ಕೊಪ್ಪಲಂಗಡಿ, ಉದ್ಯಮಿ ಮನೋಹರ್ ಶೆಟ್ಟಿ ಕಾಪು, ಉದಯ ಶೆಟ್ಟಿ ಭಾರ್ಗವ, ಸಾಸ್ ಪ್ರಧಾನ ಕಾರ್ಯದರ್ಶಿ ದಿವಾಕರ ಶೆಟ್ಟಿ ಮಲ್ಲಾರ್, ಅನಿಲ್ ಗುರುಸ್ವಾಮಿ ಕೊಪ್ಪಲಂಗಡಿ, ಉಮೇಶ್ ಮಲ್ಲಾರ್, ಶಂಕರ್ ಉಮೇಶ್, ಸಾಸ್ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

07/01/2022 11:37 am

Cinque Terre

7.65 K

Cinque Terre

0

ಸಂಬಂಧಿತ ಸುದ್ದಿ