ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಳೆಯ ಕೇಸ್ ಕೆದಕಿ ನಾಯಕರಿಗೆ ಹಿಂಸೆ ನೀಡಲಾಗುತ್ತಿದೆ; ಕೈ ನಾಯಕರ ಆಕ್ರೋಶ!

ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಇಡಿ ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧೀಸಿ ಪ್ರತಿಭಟನಾ ಸಭೆ ನಡೆಯಿತು.ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಎದುರು ನಡೆದ ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸುಧಿರ್ ಕುಮಾರ್ ಮರೊಳಿ , ಸ್ವಾತಂತ್ರ್ಯಾ ನಂತರ ಜೈಲಿಗೆ ಹೋಗುವ ಗಿರಾಕಿಗಳು ಯಾರಾದರೂ ಇದ್ದರೆ, ಅದು ಭಾರತೀಯ ಜನತಾ ಪಕ್ಷ ಮತ್ತು ಸಂಘಪರಿವಾರದವರು ಮಾತ್ರ.

8 ವರ್ಷಗಳ ಹಿಂದೆ ಹಾಕಿರುವ ಅರ್ಜಿ ಇದು. ಚುನಾವಣೆ ಬಂದಾಗಲೆಲ್ಲಾ ತನಿಖೆ ನೆಪದಲ್ಲಿ ಅವರನ್ನು ಬೆದರಿಸುವ ಕೆಲಸ ಆಗುತ್ತಿದೆ. ಗಾಂಧಿ, ನೆಹರೂ ಕುಟುಂಬದ ಸತ್ಯದ ಆಳ್ವಿಕೆಯನ್ನು ಹಣಿಯುವ ಪ್ರಯತ್ನ ಆಗುತ್ತಿದೆ ಎಂದರು.

ಈ ಸಂಧರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್,ಪಕ್ಷದ ಮುಖಂಡರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By :
PublicNext

PublicNext

22/06/2022 07:07 pm

Cinque Terre

37.63 K

Cinque Terre

2

ಸಂಬಂಧಿತ ಸುದ್ದಿ